ವಿಶ್ವ ಕುಸ್ತಿ ರ‍್ಯಾಂಕಿಂಗ್‌: ಬಜರಂಗ್ ‘ಅಗ್ರ’ ಸಾಧನೆ

7
ಮೊದಲ ಸ್ಥಾನಕ್ಕೇರಿದ ಭಾರತದ ಕುಸ್ತಿಪಟು

ವಿಶ್ವ ಕುಸ್ತಿ ರ‍್ಯಾಂಕಿಂಗ್‌: ಬಜರಂಗ್ ‘ಅಗ್ರ’ ಸಾಧನೆ

Published:
Updated:
Deccan Herald

ನವದೆಹಲಿ: ಸಾಧನೆಯ ಹಾದಿಯಲ್ಲಿ ಸತತವಾಗಿ ಮಿಂಚುತ್ತಿರುವ ಭಾರತದ ಬಜರಂಗ್ ಪೂನಿಯಾ ಅವರು ವಿಶ್ವ ಕುಸ್ತಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ರ‍್ಯಾಂಕಿಂಗ್‌ನ 65 ಕೆಜಿ ವಿಭಾಗದಲ್ಲಿ ಅವರು ಅಗ್ರ ಸ್ಥಾನವನ್ನು ಅಲಂಕರಿಸಿದರು.

24 ವರ್ಷದ ಬಜರಂಗ್ ಈ ವರ್ಷದ ವಿವಿಧ ಟೂರ್ನಿಗಳಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯಾ ಕ್ರೀಡಾಕೂಟದಲ್ಲಿ ಗೆದ್ದ ಚಿನ್ನದ ಪದಕಗಳೂ ಇದರಲ್ಲಿ ಸೇರಿಕೊಂಡಿವೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕವೂ ಅವರ ಪಾಲಾಗಿತ್ತು. ರ‍್ಯಾಂಕಿಂಗ್ ಪಟ್ಟಿಯಲ್ಲಿ ಅವರು ಒಟ್ಟಾರೆ 96 ಪಾಯಿಂಟ್‌ಗಳನ್ನು ಸಂಪಾದಿಸಿದ್ದಾರೆ.

‘ವಿಶ್ವದ ಅಗ್ರ ಕ್ರಮಾಂಕದಕ್ಕೆ ಏರುವುದು ಯಾವುದೇ ಕುಸ್ತಿಪಟುವಿನ ಕನಸು. ನಾನು ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದೆ’ ಎಂದು ಬಜರಂಗ್ ಹೇಳಿದರು.

ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿರುವ ಕ್ಯೂಬಾದ ಅಲೆಕ್ಸಾಂಡ್ರೊ ಹೆನ್ರಿಕ್‌ ಅವರಿಗೆ 66 ಪಾಯಿಂಟ್‌ಗಳು ಲಭಿಸಿವೆ. ಬುಡಾಫೆಸ್ಟ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಬಜರಂಗ್‌ ಮತ್ತು ಅಲೆಕ್ಸಾಂಡ್ರೊ ಹೆನ್ರಿಕ್‌ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಬಜರಂಗ್ ಗೆದ್ದಿದ್ದರು. ವಿಶ್ವ ಚಾಂಪಿಯನ್‌, ಜಪಾನ್‌ನ ಟಕುಟೊ ಒಟೊಗುರೊ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಐವರು ಮಹಿಳೆಯರು: ಪುರುಷರ ಯಾವುದೇ ವಯೋಮಾನದಲ್ಲಿ, ಅಗ್ರ ಹತ್ತರಲ್ಲಿ ಸ್ಥಾನ ಗಳಿಸಿದ ಭಾರತದ ಏಕೈಕ ಕುಸ್ತಿಪಟು ಆಗಿದ್ದಾರೆ ಬಜರಂಗ್‌. ಮಹಿಳಾ ವಿಭಾಗದಲ್ಲಿ ವಿವಿಧ ವಯೋಮಾನದ ಐವರು ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದಾರೆ.

*
ರ‍್ಯಾಂಕಿಂಗ್‌ ಪಟ್ಟಿಯ ಅಗ್ರ ಸ್ಥಾನಕ್ಕೇರಿದ್ದೇನೆಂದು ಸುಮ್ಮನೆ ಕೂರುವುದಿಲ್ಲ. ಮುಂದಿನ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದೇನೆ.
-ಬಜರಂಗ್ ಪೂನಿಯಾ, ಭಾರತದ ಕುಸ್ತಿಪಟು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !