ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಅಮನ್‌ಗೆ ಚಿನ್ನ, ಬಜರಂಗ್‌ಗೆ ಕಂಚು

Last Updated 5 ಜೂನ್ 2022, 19:30 IST
ಅಕ್ಷರ ಗಾತ್ರ

ಅಲ್ಮೇಟಿ: ಭಾರತದ ಕುಸ್ತಿಪಟು ಅಮನ್‌ ಅವರು ಸೀನಿಯರ್‌ ವಿಭಾಗದಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಗೆದ್ದುಕೊಂಡರು.

ಕಜಕಸ್ತಾನದ ಅಲ್ಮೇಟಿಯಲ್ಲಿ ನಡೆಯುತ್ತಿರುವ ಯುಡಬ್ಲ್ಯುಡಬ್ಲ್ಯು ರ್‍ಯಾಂಕಿಂಗ್‌ ಸರಣಿಯ ಕುಸ್ತಿಯಲ್ಲಿ ಅವರು ಭಾನುವಾರ 57 ಕೆ.ಜಿ ವಿಭಾಗದಲ್ಲಿ ಜಯ ಸಾಧಿಸಿದರು. ಫೈನಲ್‌ನಲ್ಲಿ ಅವರು ಕಜಕಸ್ತಾನದ ಮೆರೆಯ್ ಬಜರ್‌ಬಯೇವ್ ವಿರುದ್ಧ 10–9 ರಲ್ಲಿ ಗೆಲುವು ಪಡೆದರು. ಅದಕ್ಕೂ ಮುನ್ನ ನಡೆದ ಬೌಟ್‌ಗಳಲ್ಲಿ ಕಿರ್ಗಿಸ್ತಾನದ ಮೆರಂಬೆಕ್ ಕರ್ತಬೆ ಹಾಗೂ ಅಬ್ದಿಮಲಿಕ್ ಕರಚೋವ್‌ ಅವರನ್ನು
ಮಣಿಸಿದ್ದರು.

ಬಜರಂಗ್ ಪೂನಿಯಾ ಅವರು ಕಂಚು ಗೆದ್ದುಕೊಂಡರು. ಮೊದಲ ಬೌಟ್‌ನಲ್ಲಿ ಅವರು 3–5 ರಲ್ಲಿ ಉಜ್ಬೆಕಿಸ್ತಾನದ ಅಬ್ಬೋಸ್ ರಖಮನೊವ್ ಎದುರು ಪರಾಭವಗೊಂಡರು. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ 7–0 ರಲ್ಲಿ ಕಜಕಸ್ತಾನದ ರಿಫಾತ್ ಸೈಬೊತಲೋವ್ ವಿರುದ್ಧ ಗೆದ್ದರು.

ವಿಶಾಲ್‌ (70 ಕೆ.ಜಿ), ನವೀನ್ (74 ಕೆ.ಜಿ) ಮತ್ತು ಗೌರವ್‌ ಬಲ್ಯಾನ್ (79 ಕೆ.ಜಿ) ಅವರು ಪದಕ ಗೆಲ್ಲುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT