ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಬಜರಂಗ್‌ಗೆ ಅಗ್ರ ನಾಲ್ಕು ಶ್ರೇಯಾಂಕಗಳಲ್ಲಿ ಸ್ಥಾನ ಖಚಿತ

ಒಲಿಂಪಿಕ್ಸ್‌ನ 65 ಕೆ.ಜಿ. ವಿಭಾಗದ ಸ್ಪರ್ಧೆ
Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಕುಸ್ತಿ ತಾರೆ ಬಜರಂಗ್‌ ಪುನಿಯಾ ಅವರು ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನ 65 ಕೆ.ಜಿ. ಸ್ಪರ್ಧೆಯಲ್ಲಿ ಮೊದಲ ನಾಲ್ಕು ಶ್ರೇಯಾಂಕಗಳ ಒಳಗೆ ಇರುವುದು ಖಚಿತವಾಗಿದೆ.

ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಪ್ರಕಟಿಸಿದ ತಾಜಾ ಕ್ರಮಾಂಕಪಟ್ಟಿಯಲ್ಲಿ ಬಜರಂಗ್‌ 65 ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬಜರಂಗ್‌, ಕೊನೆಯ ರ‍್ಯಾಂಕಿಂಗ್ ಟೂರ್ನಿ ತಪ್ಪಿಸಿಕೊಂಡರೂ ಅವರಿಗೆ ಸಮಸ್ಯೆಯಾಗದು.

ಬಜರಂಗ್‌ ಅವರು 59 ಅಂಕ ಗಳಿಸಿದ್ದಾರೆ. ಅವರು ವಿಶ್ವಚಾಂಪಿಯನ್‌ ಫೈನಲಿಗರಾಗಿದ್ದ ನಿಯಾಜ್‌ಬೆಕೊವ್‌ (ಕಜಕಸ್ತಾನ) ಅವರನ್ನು ಕ್ರಮಾಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಕಜಕಸ್ತಾನದ ಕುಸ್ತಿಪಟು 56 ಅಂಕ ಗಳಿಸಿದ್ದಾರೆ.

ಕಳೆದ ವರ್ಷ ನೂರ್‌ ಸುಲ್ತಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರಶಿಡೋವ್‌ ವಿಜೇತರಾಗಿದ್ದರು.

ಉದಯೋನ್ಮುಖ ಪೈಲ್ವಾನ್‌ ರವಿ ದಹಿಯಾ ಕೂಡ 57 ಕೆ.ಜಿ. ವಿಭಾಗದಲ್ಲಿ ಇಂಥ ಅವಕಾಶ ಹೊಂದಿದ್ದಾರೆ. ದಹಿಯ ಪ್ರಸ್ತುತ ತಮ್ಮ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್‌, ರಷ್ಯಾದಝವುರ್‌ ಉಗುಯೆವ್‌ (60 ಅಂಕ) ಅಗ್ರಸ್ಥಾನದಲ್ಲಿದ್ದಾರೆ. ವಿಶ್ವ ರನ್ನರ್‌ ಅಪ್‌ ಸುಲೇಮಾನ್‌ ಅಟ್ಲಿ (58), ಸ್ಟೆವಾನ್‌ ಮಿಸಿಕ್‌ (48) ಮತ್ತು ದಹಿಯಾ (45) ನಂತರದ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT