ಬುಧವಾರ, ಆಗಸ್ಟ್ 21, 2019
22 °C

ಕುಸ್ತಿ: ಬಜರಂಗ್‌ಗೆ ಪ್ರಶಸ್ತಿ

Published:
Updated:

ನವದೆಹಲಿ (ಪಿಟಿಐ): ಭಾರತದ ಇಬ್ಬರು ಪ್ರಮುಖ ಕುಸ್ತಿಪಟುಗಳು ಸ್ಫೂರ್ತಿಯುತ ಪ್ರದರ್ಶನ ಮುಂದುವರಿಸಿದ್ದಾರೆ. ಬಜರಂಗ್‌ ಪುನಿಯಾ, ಜಾರ್ಜಿಯಾದ ಟಿಬಿಲಿಸಿಯಲ್ಲಿ ನಡೆ ಯುತ್ತಿರುವ ಗ್ಯಾನ್‌ಪ್ರಿ ಕೂಟದಲ್ಲಿ ಪ್ರಶಸ್ತಿ ಉಳಿಸಿಕೊಂಡಿದ್ದಾರೆ.

ಬೆಲಾರಸ್‌ನಲ್ಲಿ ಮಿನ್ಸ್ಕ್‌ನಲ್ಲಿ ನಡೆ ಯುತ್ತಿರುವ ಮೆಡ್‌ವೆಡ್‌ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ವಿನೇಶಾ ಪೋಗಟ್  ಫೈನಲ್‌ ತಲುಪಿಪಿದ್ದಾರೆ.

ಬಜರಂಗ್‌, 65 ಕೆ.ವಿ. ವಿಭಾ ಗದ ಫ್ರೀಸ್ಟೈಲ್‌ ಫೈನಲ್‌ನಲ್ಲಿ ಇರಾ ನಿನ ಪೀಮನ್‌ ಬಿಬ್ಯಾನಿ ಮೇಲೆ ಜಯ ಗಳಿಸಿದರು. ಇದು ಭಾರತದ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಪೈಲ್ವಾನ್‌ಗೆ ವರ್ಷದ ನಾಲ್ಕನೇ ಚಿನ್ನ.

ವಿನೇಶಾ, 53 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಸ್ಥಳೀಯ ಸ್ಪರ್ಧಿ ಯಫ್ರೆಮೆನ್ಕಾ ಅವರನ್ನು 11–0 ಯಿಂದ ಸುಲಭವಾಗಿ ಸೋಲಿಸಿ ನಾಲ್ಕನೇ ಚಿನ್ನದತ್ತ ಹೆಜ್ಜೆಯಿಟ್ಟರು.

 

Post Comments (+)