ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ನಭಾ, ಬಾಲಗಣೇಶ್‌ಗೆ ಪ್ರಶಸ್ತಿ

Last Updated 20 ಮೇ 2022, 13:46 IST
ಅಕ್ಷರ ಗಾತ್ರ

ಬೆಂಗಳೂರು: ನಭಾ ನಿಶಾನ್ ಹಾಗೂ ಬಾಲಗಣೇಶ್ ಪಟೇಲ್ ಅವರು ಇಲ್ಲಿ ನಡೆದ ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಶುಕ್ರವಾರ ಕೊನೆಗೊಂಡ ಟೂರ್ನಿಯ ಫೈನಲ್‌ನಲ್ಲಿ 12 ವರ್ಷದ ನಭಾ6-4, 6-2ರಿಂದ ಅರ್ಚಿಷಾ ಘೋಷ್ ಅವರನ್ನು ಪರಾಭವಗೊಳಿಸಿದರು. ನಭಾ ಅವರು ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದರು.

ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬಾಲಗಣೇಶ್‌4-6, 6-2, 6-4ರಿಂದ ಎಂ. ದಿಗಂತ್ ಅವರನ್ನು ಸೋಲಿಸಿದರು. ಬಾಲಗಣೇಶ್ ಅವರು ದರ್ಶ್‌ ಎಚ್‌.ಕೆ.‌ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿಯೂ ಕಿರೀಟ ಧರಿಸಿದರು. ಫೈನಲ್‌ನಲ್ಲಿ ಈ ಜೋಡಿಯು6-3, 4-6, 10-8ರಿಂದ ಮೋಹಿತ್ ರೆಡ್ಡಿ– ಆಯಾನ್‌ ತಾರೀನ್ ಅವರನ್ನು ಮಣಿಸಿದರು.

ಬಾಲಕಿಯರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಸೃಷ್ಟಿ ಕಿರಣ್–ತನು ವಿಶ್ವಾಸ್‌6-2, 6-2ರಿಂದ ಇಂದುಶಾ ಎನ್‌. ಕಸ್ತೂರಿ ವಿ.ಜಿ. ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT