ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಐದನೇ ಬಾರಿ ಚಾಂಪಿಯನ್

ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಟೂರ್ನಿ
Last Updated 22 ಫೆಬ್ರುವರಿ 2020, 20:12 IST
ಅಕ್ಷರ ಗಾತ್ರ

ಚೆನ್ನೈ:ಕರ್ನಾಟಕ ಮಹಿಳೆಯರ ತಂಡ ಹಣಾಹಣಿಯ ಫೈನಲ್‌ನಲ್ಲಿ ಆತಿಥೇಯ ತಮಿಳುನಾಡು ತಂಡವನ್ನು ಸೋಲಿಸಿ ಶುಕ್ರವಾರ ಮುಕ್ತಾಯಗೊಂಡ 65ನೇ ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಸತತ ಐದನೇ ಬಾರಿ ಕರ್ನಾಟಕ ಚಾಂಪಿಯನ್‌ ಆಗುತ್ತಿದೆ.

ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಮೈದಾನಲ್ಲಿ ನಡೆದ ಫೈನಲ್‌ನಲ್ಲಿ ಕರ್ನಾಟಕ 35–22, 29–35, 35–24 ರಿಂದ ಜಯಗಳಿಸಿತು.

ಸೆಮಿಫೈನಲ್ ಪಂದ್ಯಗಳಲ್ಲಿ ಕರ್ನಾಟಕ ವನಿತೆಯರು35-31, 35-18 ನೇರ ಸೆಟ್‍ಗಳಿಂದ ಕೇರಳ ತಂಡವನ್ನು; ತಮಿಳುನಾಡು ತಂಡ 35-33, 35-24 ನೇರ ಸೆಟ್‍ಗಳಿಂದ ಛತ್ತೀಸ್‍ಗಡ ತಂಡವನ್ನು ಸೋಲಿಸಿದ್ದವು.

ರಾಜ್ಯದ ಪುರುಷರ ತಂಡ ಸೆಮಿಫೈನಲ್ಸ್‌ನಲ್ಲಿ ರೈಲ್ವೆ ತಂಡದ ಎದುರು ಸೋಲನುಭವಿಸಿತು. ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು. ಪುರುಷರ ವಿಭಾಗದಲ್ಲಿ ರೈಲ್ವೆ ಚಾಂಪಿಯನ್ ಆಯಿತು.

ಡಬಲ್ಸ್‌ನಲ್ಲಿ ಕರ್ನಾಟಕಕ್ಕೆ ಅವಳಿ ಪ್ರಶಸ್ತಿ: ಇದೇ ಮೊದಲ ಬಾರಿ ರಾಜ್ಯ ಪುರುಷರ ಹಾಗೂ ಮಹಿಳೆಯರ ತಂಡಗಳು ಡಬಲ್ಸ್‌ನಲ್ಲೂ ಪ್ರಶಸ್ತಿ ಗೆದ್ದುಕೊಂಡವು. ಕರ್ನಾಟಕ, ಪುರುಷರ ವಿಭಾಗದ ಫೈನಲ್ಸ್‌ನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿತುಮಹಿಳೆಯರ ವಿಭಾಗದಲ್ಲಿ ಕೇರಳ ತಂಡವನ್ನು ಸೋಲಿಸಿತು. ಮಹಿಳಾ ತಂಡದ ನಾಯಕಿ ಜಯಲಕ್ಷ್ಮಿ ಹಾಗೂ ಕವನಾ ಎಂ.ಎಂ., ಪುರುಷರ ತಂಡದ ಮಹದೇವಸ್ವಾಮಿ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT