ಶನಿವಾರ, ಏಪ್ರಿಲ್ 4, 2020
19 °C

ಮೂರನೇ ಐಎಂ ನಾರ್ಮ್‌ ಪೂರೈಸಿದ ರಾಜ್ಯದ ಪ್ರಣವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಫಿಡೆ ಮಾಸ್ಟರ್‌ ಪ್ರಣವ್‌ ಆನಂದ್‌, ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಐಎಂ) ಪಟ್ಟಕ್ಕೆ ಅಗತ್ಯವಿರುವ ಮೂರನೇ ಐಎಂ ನಾರ್ಮ್ ಸಂಪಾದಿಸಿದರು. ಮಾಸ್ಕೊದಲ್ಲಿ ನಡೆದ ಏರೊಫ್ಲ್ಯಾಟ್‌ ಓಪನ್‌ ‘ಬಿ’ ಕ್ಯಾಟಗರಿಯಲ್ಲಿ ಆಡಿದ ಬೆಂಗಳೂರಿನ ಶಾಲಾ ವಿದ್ಯಾರ್ಥಿ ಈ ನಾರ್ಮ್ ಪಡೆದರು.

14 ವರ್ಷದ ಪ್ರಣವ್‌ ಪ್ರಸ್ತುತ ‌2,382 ಲೈವ್‌ ರೇಟಿಂಗ್ ಹೊಂದಿದ್ದಾರೆ. ಐಎಂ ಪದವಿ ಪಡೆಯಲು ಇನ್ನು 18 ಪಾಯಿಂಟ್ಸ್‌ ಅಷ್ಟೇ ಅಗತ್ಯವಿದೆ.

ಕಳೆದ ವರ್ಷ ರಿಲ್ಟನ್‌ ಕಪ್‌ (ಸ್ವೀಡನ್‌) ಟೂರ್ನಿಯಲ್ಲಿ ಮೊದಲ ನಾರ್ಮ್‌ ಪಡೆದಿದ್ದ ಪ್ರಣವ್‌, ಬೀಲ್‌ (ಸ್ವಿಜರ್ಲೆಂಡ್‌) ಟೂರ್ನಿಯಲ್ಲಿ ಎರಡನೇ ನಾಮ್‌ ಗಳಿಸಿದ್ದರು.

ಏರೋಫ್ಲ್ಯಾಟ್‌ ಟೂರ್ನಿಯಲ್ಲಿ ಪ್ರಣವ್‌ ಇಬ್ಬರು ಜಿಎಂಗಳನ್ನು ಸೋಲಿ ಸಿದರಲ್ಲದೇ, ಮೂವರು ಐಎಂಗಳ ವಿರುದ್ಧ ‘ಡ್ರಾ’ ಸಾಧಿಸಿ ಉತ್ತಮ ಸಾಧನೆ ಪ್ರದರ್ಶಿಸಿದರು.

ಗ್ರ್ಯಾಂಡ್‌ಮಾಸ್ಟರ್‌ ಗಳಾದ ಎಲಿನಾ ಡೇನಿಯಲಿಯನ್‌, ಮ್ಯಾಕ್ಸಿಮ್‌ ಲುಗೊವ್‌ಸ್ಕಾಯ್‌ ವಿರುದ್ಧ ಜಯಗಳಿಸಿದ ಪ್ರಣವ್‌, ಪ್ಲಾಟನ್‌ ಗಾಲ್‌ಪೆರಿನ್‌, ಪಾವೆಲ್‌ ಎಸ್‌.ದ್ವಲಿಶ್ವಿಲಿ ಮತ್ತು ಅಲೆಕ್ಸಿ ಮೊಕ್ಷಾನೊವ್‌ ಜೊತೆ ಪಾಯಿಂಟ್‌ ಹಂಚಿಕೊಂಡರು. ಒಂಬತ್ತು ಸುತ್ತುಗಳಿಂದ ಐದು ಪಾಯಿಂಟ್ಸ್‌ ಪಡೆದರಲ್ಲದೇ, 40 ಇಎಲ್‌ಒ ಪಾಯಿಂಟ್ಸ್‌ ಸಂಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)