ಯಶಸ್ಸಿಗೆ ಗಟ್ಟಿ ತಳಪಾಯ ಬೇಕು: ಟಿಮ್‌ ಹಾರ್ಡವೇ

7
ಭಾರತದ 39 ನಗರಗಳಲ್ಲಿ ಸಂವಾದ; ಭೋಜನದೊಂದಿಗೆ ಎನ್‌ಬಿಎ ಬ್ರ್ಯಾಂಡ್‌ ಬ್ಯಾಸ್ಕೆಟ್‌ಬಾಲ್‌

ಯಶಸ್ಸಿಗೆ ಗಟ್ಟಿ ತಳಪಾಯ ಬೇಕು: ಟಿಮ್‌ ಹಾರ್ಡವೇ

Published:
Updated:

ಬೆಂಗಳೂರು: ಬ್ಯಾಸ್ಕೆಟ್‌ಬಾಲ್‌ನಲ್ಲಿ ಯಶಸ್ಸು ಸಾಧಿಸಬೇಕಾದರೆ ತಳಪಾಯ ಗ‌ಟ್ಟಿ ಇರಬೇಕು. ಅಮೆರಿಕದಲ್ಲಿ ಸಣ್ಣ ವಯಸ್ಸಿನಲ್ಲೇ ಉತ್ತಮ ಅಡಿಪಾಯ ಹಾಕಿಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಆಟಗಾರ ಟಿಮ್‌ ಹಾರ್ಡವೇ ಅಭಿಪ್ರಾಯಪಟ್ಟರು.

ಮೆಕ್‌ಡೊನಾಲ್ಡ್ಸ್‌ ಕಂಪನಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ರೀಡೆಯಲ್ಲಿ ನಕಲು ಮಾಡಲು ಆಗುವುದಿಲ್ಲ. ಸ್ವಂತ ಸಾಮರ್ಥ್ಯದಿಂದ ಬೆಳೆದರೆ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯ. ಆದ್ದರಿಂದ ಕಠಿಣ ಪರಿಶ್ರಮ ಹಾಕಲು ಯುವ ಆಟಗಾರರು ಮುಂದಾಗಬೇಕು. ಕೋಚ್‌ ಕೇವಲ ದಾರಿ ತೋರಿಸುತ್ತಾರೆ. ಅದರ ಉಪಯೋಗ ಪಡೆದುಕೊಂಡು ತನ್ನತನವನ್ನು ತೋರಿಸಬೇಕಾದದ್ದು ಆಟಗಾರನ ಜವಾಬ್ದಾರಿ’ ಎಂದು ಅವರು ಹೇಳಿದರು.

ಎನ್‌ಬಿಎ–ಮೆಕ್‌ಡೊನಾಲ್ಡ್‌ ಒಪ್ಪಂದ: ‘ಅಮೆರಿಕದ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ (ಎನ್‌ಬಿಎ) ಜೊತೆ ಮೆಕ್‌ಡೊನಾಲ್ಡ್ ಒಪ್ಪಂದ ಮಾಡಿಕೊಂಡಿದ್ದು ಕುಂಟುಬದವರು ಜೊತೆಯಾಗಿ ಸವಿಯುವ ಪ್ರತಿ ಭೋಜನದ ಜೊತೆಯಲ್ಲಿ ಎನ್‌ಬಿಎ ಬ್ರ್ಯಾಂಡ್‌ನ ಬ್ಯಾಸ್ಕೆಟ್‌ಬಾಲ್‌ ನೀಡಲಾಗುವುದು’ ಎಂದು ಮೆಕ್‌ಡೊನಾಲ್ಡ್ ಕಂಪನಿಯ ಉಪಾಧ್ಯಕ್ಷೆ ಸೀಮಾ ಅರೋರಾ ನಂಬಿಯಾರ್ ತಿಳಿಸಿದರು.

‘ಮೆಕ್‌ಡೊನಾಲ್ಡ್‌ನ ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ಮಾತ್ರ ಸದ್ಯ ಈ ಕೊಡುಗೆಯನ್ನು ನೀಡಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವುದಕ್ಕೂ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಟಿಮ್ ಅವರು ಭಾರತದ 39 ನಗರಗಳಲ್ಲಿ ಸಂವಾದ ನಡೆಸಲಿದ್ದಾರೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !