ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ‘ರನ್ನರ್ಸ್‌ ಅಪ್‌’

7

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ‘ರನ್ನರ್ಸ್‌ ಅಪ್‌’

Published:
Updated:

ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡದವರು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯೂತ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ ತಂಡ 66–67 ಪಾಯಿಂಟ್ಸ್‌ನಿಂದ ಪಂಜಾಬ್‌ ಎದುರು ಸೋತಿತು.

ಕರ್ನಾಟಕದ ವನಿತೆಯರು ಆರಂಭದಿಂದಲೇ ಚುರುಕಿನ ಆಟಕ್ಕೆ ಮುಂದಾದರು. ಚೆಂಡನ್ನು ನಿಖರವಾಗಿ ‘ಬ್ಯಾಸ್ಕೆಟ್‌’ ಮಾಡುತ್ತಾ ಪಾಯಿಂಟ್ಸ್‌ ಕಲೆಹಾಕಿದ ರಾಜ್ಯದ ವನಿತೆಯರು ಮೊದಲ ಕ್ವಾರ್ಟರ್‌ನ ಅಂತ್ಯಕ್ಕೆ 15–13ರಿಂದ ಮುನ್ನಡೆ ಗಳಿಸಿದರು.

ಎರಡು ಮತ್ತು ಮೂರನೇ ಕ್ವಾರ್ಟರ್‌ಗಳಲ್ಲಿ ಪಂಜಾಬ್‌ ಪಾರಮ್ಯ ಮೆರೆಯಿತು. ಕೊನೆಯ ಕ್ವಾರ್ಟರ್‌ನಲ್ಲಿ ಕರ್ನಾಟಕದ ಆಟ ರಂಗೇರಿತು. ರೋಚಕ ಹೋರಾಟ ಕಂಡುಬಂದ ಈ ಕ್ವಾರ್ಟರ್‌ನಲ್ಲಿ ರಾಜ್ಯದ ವನಿತೆಯರು 23 ಪಾಯಿಂಟ್ಸ್‌ ಗಳಿಸಿದರು. 18 ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡ ಪಂಜಾಬ್‌ ಸಂಭ್ರಮಿಸಿತು.

ಕರ್ನಾಟಕದ ಸಂಜನಾ 22 ಪಾಯಿಂಟ್ಸ್‌ ಕಲೆಹಾಕಿದರು. ಹರಿಣಿ 13 ಪಾಯಿಂಟ್ಸ್‌ ಸಂಗ್ರಹಿಸಿದರು. ಪಂಜಾಬ್‌ ತಂಡದ ಕಾವ್ಯಾ 13 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

‍ಬಾಲಕರ ತಂಡ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು. ರಾಜ್ಯ ತಂಡದವರು 71–92 ಪಾಯಿಂಟ್ಸ್‌ನಿಂದ ತಮಿಳುನಾಡು ವಿರುದ್ಧ ಸೋತರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !