ಭಾನುವಾರ, ಸೆಪ್ಟೆಂಬರ್ 15, 2019
30 °C

ಫೈನಲ್‌ಗೆ ಬ್ಯಾಂಕ್‌ ಆಫ್‌ ಬರೋಡ

Published:
Updated:

ಬೆಂಗಳೂರು: ಆತಿಥೇಯ ಬ್ಯಾಂಕ್ ಆಫ್‌ ಬರೋಡ ತಂಡವು ಮುಲ್ಕಿ ಸುಂದರ ರಾಮ್‌ ಶೆಟ್ಟಿ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಮಲ್ಲೇಶ್ವರದ ಬೀಗಲ್ಸ್‌ ಕ್ಲಬ್‌ ಅರೇನಾದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಬ್ಯಾಂಕ್‌ ಆಫ್‌ ಬರೋಡ 73–53 ಪಾಯಿಂಟ್ಸ್‌ನಿಂದ ಚೆನ್ನೈಯ ಇನ್‌ಕಮ್‌ ಟ್ಯಾಕ್ಸ್‌ ತಂಡವನ್ನು ಪರಾಭವಗೊಳಿಸಿತು.

ವಿಜಯಿ ತಂಡದ ಕ್ಲಿಂಟನ್‌, ಅರವಿಂದ್‌ ಮತ್ತು ಹರೀಶ್‌ ಅವರು ಕ್ರಮವಾಗಿ 18, 15 ಮತ್ತು 14 ಪಾಯಿಂಟ್ಸ್‌ ಕಲೆಹಾಕಿದರು.

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ತಿರುವನಂತಪುರದ ಕೆಎಸ್‌ಇಬಿ ತಂಡ 67–63 ಪಾಯಿಂಟ್ಸ್‌ನಿಂದ ಚೆನ್ನೈಯ ಇಂಡಿಯನ್‌ ಬ್ಯಾಂಕ್‌ ತಂಡದ ಎದುರು ಗೆದ್ದಿತು.

ಕೆಎಸ್‌ಇಬಿ ತಂಡದ ಜಿಶ್ನು ಮತ್ತು ಗ್ರಿಗೊ ಅವರು ತಲಾ 18 ಪಾಯಿಂಟ್ಸ್‌ ಕಲೆಹಾಕಿದರು.

Post Comments (+)