ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಕನಸಲ್ಲಿ ಆತಿಥೇಯರು

ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಹಾಕಿ: ಇಂದು ಐಒಸಿಎಲ್‌ ಎದುರು ಸೆಮಿ ಹಣಾಹಣಿ
Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಿಕಿನ್‌ ತಿಮ್ಮಯ್ಯ ಸಾರಥ್ಯದ ಹಾಕಿ ಕರ್ನಾಟಕ ತಂಡವು ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ.

ಶನಿವಾರ ನಡೆಯುವ ಮೊದಲ ಸೆಮಿಫೈನಲ್‌ ಹಣಾಹಣಿಯಲ್ಲಿ ನಿಕಿನ್‌ ಬಳಗವು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಸವಾಲು ಎದುರಿಸಲಿದೆ.

ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಮಧ್ಯಾಹ್ನ 2ಕ್ಕೆ ಈ ಹೋರಾಟ ನಿಗದಿಯಾಗಿದೆ.

ರೌಂಡ್‌ ರಾಬಿನ್‌ ಹಂತದ ಮೊದಲ ಪಂದ್ಯದಲ್ಲಿ ಏರ್‌ ಇಂಡಿಯಾ ಎದುರು 2–2 ಗೋಲುಗಳಿಂದ ಡ್ರಾ ಮಾಡಿಕೊಂಡಿದ್ದ ಆತಿಥೇಯರು, ಎರಡನೇ ಪಂದ್ಯದಲ್ಲಿ 2–1 ಗೋಲುಗಳಿಂದ ಇಂಡಿಯನ್‌ ಏರ್‌ಫೋರ್ಸ್‌ ತಂಡವನ್ನು ಸೋಲಿಸಿದ್ದರು. ತನ್ನ ಅಂತಿಮ ಹಣಾಹಣಿಯಲ್ಲಿ 1–1 ಗೋಲುಗಳಿಂದ ಆರ್ಮಿ ಇಲೆವನ್‌ ಎದುರು ಡ್ರಾ ಮಾಡಿಕೊಂಡಿದ್ದ ಹಾಕಿ ಕರ್ನಾಟಕವು ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು.

ನಾಯಕ ನಿಕಿನ್‌, ಕೆ.ಪಿ.ಸೋಮಯ್ಯ ಮತ್ತು ಪೃಥ್ವಿರಾಜ್‌ ಆತಿಥೇಯ ತಂಡ ಶಕ್ತಿಯಾಗಿದ್ದಾರೆ.

ವಿ.ಆರ್‌.ರಘುನಾಥ್‌, ಎಸ್‌.ಕೆ.ಉತ್ತಪ್ಪ, ಯುವರಾಜ್‌ ವಾಲ್ಮಿಕಿ ಅವರಂತಹ ಘಟಾನುಘಟಿಗಳನ್ನು ಹೊಂದಿರುವ ಐಒಸಿಎಲ್‌ ಕೂಡ ಗೆಲುವಿನ ಕನಸು ಕಾಣುತ್ತಿದೆ.

ಸಂಜೆ 4 ಗಂಟೆಗೆ ನಡೆಯುವ ದಿನದ ಇನ್ನೊಂದು ಹಣಾಹಣಿಯಲ್ಲಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ತಂಡ ಆರ್ಮಿ ಇಲೆವನ್‌ ವಿರುದ್ಧ ಹೋರಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT