ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್‌ ಸ್ಕ್ವಾಷ್‌ ಟೂರ್ನಿ: ಅಭಿಷೇಕ್‌, ಅಪರಜಿತಾಗೆ ಪ್ರಶಸ್ತಿ

Last Updated 10 ಸೆಪ್ಟೆಂಬರ್ 2019, 18:18 IST
ಅಕ್ಷರ ಗಾತ್ರ

ಬೆಂಗಳೂರು: ದಿಟ್ಟ ಆಟ ಆಡಿದ ಅಭಿಷೇಕ್‌ ಅಗರವಾಲ್‌ ಮತ್ತು ಅಪರಜಿತಾ ಬಾಲಮುರುಗನ್‌ ಅವರು ಭಾರತ ಸ್ಕ್ವಾಷ್‌ ರ‍್ಯಾಕೆಟ್ಸ್‌ ಫೆಡರೇಷನ್‌ ಮತ್ತು ರೇ ಮಲಿಕ್‌ ಸ್ಕೂಲ್‌ ಆಫ್‌ ಸ್ಕ್ವಾಷ್‌ ಸಹಯೋಗದಲ್ಲಿ ನಡೆದ ಬೆಂಗಳೂರು ಓಪನ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನ ಅಂಗಳದಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ ಅಭಿಷೇಕ್‌ 8–11, 11–9, 9–11, 12–10, 11–6ರಲ್ಲಿ ವಿಕಾಸ್‌ ಮೆಹ್ರಾ ಅವರನ್ನು ಸೋಲಿಸಿದರು.

ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಅಪರಜಿತಾ 11–3, 11–5, 11–5ರಲ್ಲಿ ತೃಣ ಐರಿಸ್‌ ಎದುರು ಗೆದ್ದರು.

19 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿ ನವನೀತ್‌ ಪ್ರಭು ಅವರ ಪಾಲಾಯಿತು. ಅಂತಿಮ ಘಟ್ಟದ ಪೈಪೋಟಿಯಲ್ಲಿ ನವನೀತ್ 11–5, 9–11, 9–11, 11–4, 11–6ರಲ್ಲಿ ಕಿಶೋರ್‌ ಅರವಿಂದ್‌ ಅವರನ್ನು ಪರಾಭವಗೊಳಿಸಿದರು.

17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಆರ್‌.ಪೂಜಾ ಆರತಿ 7–11, 11–4, 11–8, 11–5ರಲ್ಲಿ ದೀಕ್ಷಾ ಅರವಿಂದೊ ಅವರನ್ನು ಸೋಲಿಸಿದರು.

ಈ ವಿಭಾಗದ ಬಾಲಕರ ಸಿಂಗಲ್ಸ್‌ನಲ್ಲಿ ಅಖಿಲೇಶ್‌ ಕುಮಾರ್‌ ಚಾಂಪಿಯನ್‌ ಆದರು. ಫೈನಲ್‌ನಲ್ಲಿ ಅಖಿಲೇಶ್‌ 12–14, 11–3, 8–11, 11–8, 11–8ರಲ್ಲಿ ಆದಿಲ್‌ ಮೊಹಮ್ಮದ್‌ ಸೈಯದ್‌ ಎದುರು ವಿಜಯಿಯಾದರು.

15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ವಿ.ದೀಪಿಕಾ 12–10, 11–7, 11–2ರಲ್ಲಿ ಕರ್ನಾಟಕದ ಸ್ಕಂದಾ ದೋಗ್ರಾ ಎದುರೂ, ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ದೇವಯ್‌ ಮೆಹ್ತಾ 11–9, 11–8, 3–11, 11–7ರಲ್ಲಿ ಅಶ್ವಿನ್‌ ಗಣೇಶ್‌ ವಿರುದ್ಧವೂ ಗೆದ್ದು ಪ್ರಶಸ್ತಿ ಪಡೆದರು.

13 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿಗಳು ಕ್ರಮವಾಗಿ ಸಂದೇಶ್‌ ಮತ್ತು ಖುಷ್ಬೂ ಅವರ ಪಾಲಾದವು.

ಸಂದೇಶ್‌ 11–3, 11–5, 11–5ರಲ್ಲಿ ಉದಿತ್‌ ಮಿಶ್ರಾ ಎದುರೂ, ಖುಷ್ಬೂ 9–11, 11–5, 11–4, 11–8ರಲ್ಲಿ ಪೆರಿನಾ ಶರ್ಮಾ ಮೇಲೂ ಗೆದ್ದರು.

11 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಎಸ್‌.ಲೋಕೇಶ್‌ 11–6, 11–7, 11–7ರಲ್ಲಿ ಶ್ರೀನಾಥ್‌ ಸುಬ್ರಮಣಿಯನ್‌ ಅರುಣ್‌ ಸುಭಾಷ್‌ ಎದುರೂ, ಬಾಲಕಿಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ವ್ಯೋಮಿಕಾ ಖಾಂಡೇಲ್‌ವಾಲ್‌ 8–11, 11–13, 11–7, 11–4, 11–4ರಲ್ಲಿ ಸಹನಾ ಕಲೈವಣ್ಣನ್‌ ಮೇಲೂ ವಿಜಯಿಯಾದರು.

40 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್‌ ದತ್ತಾ 11–6, 11–5, 7–11, 9–11, 11–7ರಲ್ಲಿ ಸಂಜಯ್‌ ರಾಜ್‌ಪಾಲ್‌ ಎದುರು ಗೆದ್ದರು.

50 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್‌ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಕರ್ನಾಟಕದ ಅರುಣ್‌ ರವೀಂದ್ರನಾಥ್‌ 11–8, 11–6, 11–5ರಲ್ಲಿ ರಾಜೀವ್‌ ಭಾಟಿಯಾ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ವಿವಿಧ ರಾಜ್ಯಗಳ 288 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT