ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್ ಆಟಗಾರರಿಗೆ ನೆರವು

Last Updated 13 ಸೆಪ್ಟೆಂಬರ್ 2020, 18:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ –19ರಿಂದಾಗಿ ತೊಂದರೆಗೆ ಒಳಗಾಗಿದ್ದ 47 ಬ್ಯಾಸ್ಕೆಟ್‌ಬಾಲ್ ಪಟುಗಳಿಗೆ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆರ್ಥಿಕ ನೆರವು ನೀಡಿದೆ. ಇವರಲ್ಲಿ ಕರ್ನಾಟಕದ ಏಳು ಕ್ರೀಡಾಪಟುಗಳೂ ಇದ್ದಾರೆ.

ಫೆಡರೇಷನ್ ಈಚೆಗೆ ಸಮಿತಿಯೊಂದನ್ನು ರಚಿಸಿ ನೆರವು ಅಗತ್ಯ ಇರುವ ಕ್ರೀಡಾಪಟುಗಳ ಪಟ್ಟಿ ಸಿದ್ಧಗೊಳಿಸಿತ್ತು. ಕಳೆದ 10 ದಿನಗಳಿಂದ ಸಮಿತಿ ಆನ್‌ಲೈನ್ ಮೂಲಕ ಸಭೆಗಳನ್ನು ನಡೆಸಿತ್ತು. ಶಿಕ್ಷಣ, ತರಬೇತಿ, ಕ್ರೀಡಾ ಕಿಟ್‌ಗಳ ಖರೀದಿ ಮತ್ತು ವೈದ್ಯಕೀಯ ಅಗತ್ಯಕ್ಕಾಗಿ ಬಳಸಲು ಆರ್ಥಿಕ ನೆರವು ನೀಡಲಾಗಿದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರಿಗೆ ₹ 50 ಸಾವಿರ ಮತ್ತು ರಾಷ್ಟ್ರೀಯ ಶಿಬಿರಗಳಿಗೆ ಆಯ್ಕೆಯಾದವರಿಗೆ ₹ 25 ಸಾವಿರ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT