ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪೊಲೀಸ್‌ ಕ್ರೀಡಾಕೂಟ: ಬಿಎನ್‌ಎಸ್‌ ರೆಡ್ಡಿಗೆ ಚಿನ್ನ

Last Updated 1 ಆಗಸ್ಟ್ 2022, 13:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿಸಿಐ ಭ್ರಷ್ಟಾಚಾರ ತಡೆ ಘಟಕದ ವಲಯ ಪ್ರತಿನಿಧಿ, ನಿವೃತ್ತ ಐಪಿಎಸ್‌ ಅಧಿಕಾರಿ ಬಿಎನ್‌ಎಸ್‌ ರೆಡ್ಡಿ ಅವರು ನೆದರ್ಲೆಂಡ್ಸ್‌ನ ರೋಟರ್‌ಡ್ಯಾಮ್‌ನಲ್ಲಿ ನಡೆದ ವಿಶ್ವ ಪೊಲೀಸ್‌ ಮತ್ತು ಫೈರ್‌ ಗೇಮ್ಸ್‌ನ ಟೆನಿಸ್‌ ಟೂರ್ನಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಎಸ್‌.ಎಂ.ಶರ್ಮಾ ಜತೆಗೂಡಿ ಆಡಿದ ರೆಡ್ಡಿ ಚಿನ್ನ ಗೆದ್ದರು. ಫೈನಲ್‌ನಲ್ಲಿ ಭಾರತದ ಜೋಡಿ 6–1, 6–4 ರಲ್ಲಿ ಥಾಯ್ಲೆಂಡ್‌ನ ಸುಖವಚನ ಸಂತ್‌– ವಿನ್ಸನ್ ಸಂತದ್‌ ವಿರುದ್ಧ ಜಯಿಸಿತು.

ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಅವರು ಮಂಡಿನೋವಿನ ಕಾರಣ ಆಡದಿರಲು ನಿರ್ಧರಿಸಿದರು. ಇದರಿಂದ ಅವರ ಎದುರಾಳಿ ರೊಮೇನಿಯದ ಎಂ.ಇಯೊನ್‌ಗೆ ಚಿನ್ನ ಲಭಿಸಿದರೆ, ರೆಡ್ಡಿ ಅವರು ಬೆಳ್ಳಿ ಪದಕ ಪಡೆದರು.

ವಿಶ್ವ ಪೊಲೀಸ್‌ ಗೇಮ್ಸ್‌ನ ಟೆನಿಸ್‌ನ ಸಿಂಗಲ್ಸ್‌ ವಿಭಾಗದಲ್ಲಿ ಸತತವಾಗಿ ಮೂರು ಚಿನ್ನ ಗೆದ್ದ ಸಾಧನೆಯನ್ನು ಅವರು ಮಾಡಿದ್ದರು. ಈ ಹಿಂದೆ ಅಮೆರಿಕದ ವರ್ಜೀನಿಯಾ (2015), ಲಾಸ್‌ ಏಂಜಲೀಸ್ (2017) ಮತ್ತು ಚೀನಾದ ಚೆಂಗ್ಡುವಿನಲ್ಲಿ (2019) ನಡೆದಿದ್ದ ಕೂಟಗಳಲ್ಲಿ ಚಾಂಪಿಯನ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT