ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸರ್‌ ನೆಪೋಲಿಸ್‌ ನಿಧನ

Last Updated 17 ಆಗಸ್ಟ್ 2019, 13:38 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ಬಾಕ್ಸಿಂಗ್‌ ದಿಗ್ಗಜ ಜೋಸ್‌ ನೆಪೋಲಿಸ್‌ (79) ಶುಕ್ರವಾರ ನಿಧನರಾಗಿದ್ದಾರೆ.

ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌ (ಡಬ್ಲ್ಯುಬಿಸಿ) ಈ ವಿಷಯವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

1940ರಲ್ಲಿ ಕ್ಯೂಬಾದಲ್ಲಿ ಜನಿಸಿದ್ದ ನೆಪೋಲಿಸ್‌, ಎರಡು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು. ವೆಲ್ಟರ್‌ವೇಟ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ವೃತ್ತಿಬದುಕಿನಲ್ಲಿ ಒಟ್ಟು 88 ಪಂದ್ಯಗಳನ್ನು ಆಡಿದ್ದ ಅವರು ಈ ಪೈಕಿ ಸೋತಿದ್ದು ಕೇವಲ ಏಳರಲ್ಲಿ. 54 ನಾಕೌಟ್‌ ಪಂದ್ಯಗಳನ್ನು ಗೆದ್ದ ಹಿರಿಮೆಗೂ ಅವರು ಭಾಜನರಾಗಿದ್ದರು.

1969ರಲ್ಲಿ ನೆಪೋಲಿಸ್‌ ಅವರು ಮೆಕ್ಸಿಕೊದ ಪೌರತ್ವ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT