ಭಾನುವಾರ, ನವೆಂಬರ್ 27, 2022
27 °C

ಬಾಕ್ಸಿಂಗ್: ಶಿವ ಠಾಕರಾನ್‌ಗೆ ಡಬ್ಲ್ಯುಬಿಸಿ ಏಷ್ಯಾ ಕಾಂಟಿನೆಂಟಲ್‌ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್‌: ಭಾರತದ ಸೂಪರ್‌ ಮಿಡ್ಲ್‌ವೇಟ್‌ ಬಾಕ್ಸರ್‌ ಶಿವ ಠಾಕರಾನ್‌ ಅವರು ಡಬ್ಲ್ಯುಬಿಸಿ ಏಷ್ಯಾ ಕಾಂಟಿನೆಂಟಲ್‌ ಪ್ರಶಸ್ತಿ ಜಯಿಸಿದ್ದಾರೆ.

ಬುಧವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಶಿವ, ಮಲೇಷ್ಯಾದ ಅದ್ಲಿ ಹಫೀಜ್‌ ವಿರುದ್ಧ ಗೆದ್ದರು. ಎಂಟು ಸುತ್ತುಗಳ ಪೈಪೋಟಿಯನ್ನು ಭಾರತದ ಬಾಕ್ಸರ್‌ ‘ಟೆಕ್ನಿಕಲ್‌ ನಾಕೌಟ್‌’ನಿಂದ ಜಯಿಸಿದರು. 

‘ಈ ಪೈಪೋಟಿಯಲ್ಲಿ ಗೆಲ್ಲುತ್ತೇನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದ್ದರಿಂದ ಎಲ್ಲರೂ ನನ್ನನ್ನು ಕಡೆಗಣಿಸಿದ್ದರು’ ಎಂದು 25 ವರ್ಷದ ಶಿವ ಪ್ರತಿಕ್ರಿಯಿಸಿದ್ದಾರೆ.

2016 ರಲ್ಲಿ ವೃತ್ತಿಪರ ಬಾಕ್ಸರ್‌ ಆಗಿ ಬದಲಾದ ಬಳಿಕ ಶಿವ ಅವರು 16–3 ಗೆಲುವು– ಸೋಲಿನ ದಾಖಲೆ ಹೊಂದಿದ್ದಾರೆ. ಅದರಲ್ಲಿ ಎಂಟು ಹಣಾಹಣಿಗಳಲ್ಲಿ ಎದುರಾಳಿಯನ್ನು ನೆಲಕ್ಕುರುಳಿಸಿ ಗೆಲುವು ಸಾಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು