ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಬಾಕ್ಸಿಂಗ್‌ ಟೂರ್ನಿ: ಗೌರವ್‌, ಪಿಂಕಿ ಕ್ವಾರ್ಟರ್‌ಫೈನಲ್‌ಗೆ

Last Updated 31 ಜುಲೈ 2019, 18:37 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್ವೆಲ್ತ್‌ ಗೇಮ್ಸ್ ಪದಕ ವಿಜೇತ ಗೌರವ್‌ ಸೋಲಂಕಿ ಹಾಗೂ ಪಿಂಕಿ ಜಾಂಗ್ರಾ ಅವರು ರಷ್ಯಾದ ಕಸ್ಪಿಯಸ್ಕ್‌ಯಲ್ಗಿ ನಡೆಯುತ್ತಿರುವ ಮ್ಯಾಗೊಮದ್‌ ಸಲಾಮ್‌ ಉಮಖನೊವ್‌ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪುರುಷರ 56 ಕೆಜಿ ವಿಭಾಗದಲ್ಲಿ ಸೋಲಂಕಿ ಅವರು ರಷ್ಯಾದ ಮುರಾದ್‌ ರಬದನೊವ್‌ ಅವರನ್ನು 5–0ಯಿಂದ ಮಣಿಸಿ ಸಂಭ್ರಮಿಸಿದರು.

ಜಾಂಗ್ರಾ ಅವರು ಮಹಿಳೆಯರ 51 ಕೆಜಿ ವಿಭಾಗದಲ್ಲಿ ಬೆಲಾರಸ್‌ನ ಬುರಿಮ್‌ ಯಾನಾ ವಿರುದ್ಧ ಅಷ್ಟೇ ಅಂತರದಿಂದ ಗೆಲುವಿನ ನಗೆ ಬೀರಿದರು.

ಮಹಿಳೆಯರ 57 ಕೆಜಿ ವಿಭಾಗದಲ್ಲಿ ನೀರಜ್‌ ಕೂಡ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು. ಮಂಗೋಲಿಯಾ ಬಾಕ್ಸರ್‌ ಗೆರೆಲ್ಸಿಮೆಗ್‌ ನ್ಯಾಮ್ಸುರೆನ್‌ ವಿರುದ್ಧ ಏಕಪಕ್ಷೀಯ ಪಂದ್ಯದಲ್ಲಿ ಅವರು ಗೆದ್ದರು.

20 ದೇಶಗಳ ಸುಮಾರು 250 ಬಾಕ್ಸರ್‌ಗಳು ಈ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT