ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್ ಕ್ರೀಡೆ ಪುರುಷರಿಗಷ್ಟೇ ಅಲ್ಲ: ಮೇರಿ ಕೋಮ್

Last Updated 10 ಜೂನ್ 2020, 14:59 IST
ಅಕ್ಷರ ಗಾತ್ರ

ನವದೆಹಲಿ: ಬಾಕ್ಸಿಂಗ್ ಕ್ರೀಡೆಯು ಬರೀ ಪುರುಷರಿಗಷ್ಟೇ ಅಲ್ಲ ಎಂದು ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಹೇಳಿದ್ದಾರೆ.

ಬುಧವಾರ ಆನ್‌ಲೈನ್ ಮೂಲಕ 25 ಸಾವಿರ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಅವರು, ‘ಎಲ್ಲರ ಜೀವನದಲ್ಲಿಯೂ ಹಲವಾರು ಅಡೆತಡೆಗಳು ಬರುತ್ತವೆ. ಅದರೆ ನಿರಂತರವಾಗಿ ಶ್ರಮಿಸುತ್ತ ಮುಂದುವರಿಯಬೇಕು. ಗುರಿಯನ್ನು ತಲುಪುವಾಗ ಚಿತ್ತ ಕಲಕುವ ಸಾಧ್ಯತೆಗಳು ಹಲವಿರುತ್ತವೆ. ಏಕಾಗ್ರತೆ, ಕಠಿಣ ಪರಿಶ್ರಮದಿಂದ ಮುನ್ನುಗ್ಗಬೇಕು’ ಎಂದರು. ’ಲೆಜೆಂಡ್ಸ್‌ ಆನ್ ಅನ್‌ಅಕಾಡೆಮಿ’ ಕಾರ್ಯಕ್ರಮ ಅಂಗವಾಗಿ ಅವರು ಸಂವಾದ ನಡೆಸಿದರು.

‘ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿ. ಯಾರೋ ಒಬ್ಬರು ಸಾಧಿಸಲು ಸಾಧ್ಯವಾಗಿರುತ್ತದೆಯೆಂದರೆ, ನಿಮಗೂ ಅದು ಸಾಧ್ಯ. ಆದರೆ ಯಾವುದೂ ಸುಲಭವಾಗಿ ಒಲಿಯುವುದಿಲ್ಲ. ಅದಕ್ಕಾಗಿ ಸೋಲಬೇಕು. ಬೀಳಬೇಕು. ಅಡೆತಡೆಗಳನ್ನು ದಾಟಿ ಮುನ್ನುಗ್ಗುತ್ತಲೇ ಇರಬೇಕು. ಶಿಸ್ತು, ಛಲ ಮತ್ತು ಏಕಾಗ್ರತೆಗಳಿಂದ ಲಭಿಸುವ ಶಕ್ತಿಯು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ’ ಎಂದು ಮೇರಿ ಹೇಳಿದರು.

60 ನಿಮಿಷ ನಡೆದ ಕಾರ್ಯಕ್ರಮದಲ್ಲಿ ಮೇರಿ ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳು ಮತ್ತು ಅವುಗಳನ್ನು ದಾಟಿ ಬಂದ ಬಗೆ, ಮಾಡಿದ ಸಾಧನೆಗಳ ಕುರಿತು ಮಾತನಾಡಿದರು.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೇರಿ ಕಂಚಿನ ಪದಕ ಗೆದ್ದಿದ್ದರು. ಆರು ಬಾರಿ ವಿಶ್ವ ಚಾಂಪಿಯನ್ ಕಿರೀಟವನ್ನೂ ಧರಿಸಿದ್ದಾರೆ. ಮಣಿಪುರದ ಮೇರಿ ರಾಜ್ಯಸಭೆ ಸದಸ್ಯರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT