ಸೋಮವಾರ, ಫೆಬ್ರವರಿ 17, 2020
21 °C

ಬಾಕ್ಸಿಂಗ್‌ ಲೀಗ್‌: ಗುಜರಾತ್‌ಗೆ ಆಘಾತ ನೀಡಿದ ಬಾಂಬೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಂಬೆ ಬುಲೆಟ್ಸ್‌ ತಂಡದವರು ಇಂಡಿಯನ್‌ ಬಾಕ್ಸಿಂಗ್‌ ಲೀಗ್‌ನ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ಗೆ ಆಘಾತ ನೀಡಿದ್ದಾರೆ.

ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಬಾಂಬೆ ತಂಡ 4–3 ಯಿಂದ ಜಯಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 11ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು.

ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಜೈಂಟ್ಸ್‌ (17 ಪಾಯಿಂಟ್ಸ್‌) ತಂಡ ನಾಯಕ ಅಮಿತ್‌ ಪಂಘಾಲ್‌ (52 ಕೆ.ಜಿ), ಎಲ್‌.ಸರಿತಾ ದೇವಿ (60 ಕೆ.ಜಿ) ಮತ್ತು ಮೊಹಮ್ಮದ್‌ ಹಸಮುದ್ದೀನ್‌ (57 ಕೆ.ಜಿ) ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

69 ಕೆ.ಜಿ. ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಬಾಂಬೆ ತಂಡದ 20 ವರ್ಷದ ಬಾಕ್ಸರ್‌ ನವೀನ್‌ ಬೂರಾ, ಅನುಭವಿ ದುರ್ಯೋಧನ ಸಿಂಗ್‌ ನೇಗಿ ಅವರನ್ನು ಸೋಲಿಸಿ ಗಮನ ಸೆಳೆದರು. 52 ಕೆ.ಜಿ.ವಿಭಾಗದ ಸ್ಪರ್ಧೆಯಲ್ಲಿ ಅನಂತ ಚೋಪಡೆ ಅವರು ಗುಜರಾತ್‌ ತಂಡದ ಸಂಜಯ್‌ ಕುಮಾರ್‌ ವಿರುದ್ಧ ಜಯಿಸಿದರು.

ಮಹಿಳೆಯರ 60 ಕೆ.ಜಿ. ವಿಭಾಗದ ಪಂದ್ಯದಲ್ಲಿ ಪರ್ವೀನ್‌ ಹೂಡಾ ಅವರು ಸ್ಪೇನ್‌ನ ಮೆಲಿಸಾ ನೊಯೆಮಿ ಗೊಂಜಾಲೆಜ್‌ ಅವರನ್ನು ಮಣಿಸಿ ಗುಜರಾತ್‌ ತಂಡವು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿಯಲು ನೆರವಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು