ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಹ್ಯಾಟ್ರಿಕ್ ಜಯದ ನಿರೀಕ್ಷೆ

7
ಯು.ಪಿ.ಯೋಧಾ–ತೆಲುಗು ಟೈಟನ್ಸ್ ಪಂದ್ಯ ರೋಚಕ ಟೈಯಲ್ಲಿ ಮುಕ್ತಾಯ

ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಹ್ಯಾಟ್ರಿಕ್ ಜಯದ ನಿರೀಕ್ಷೆ

Published:
Updated:
Deccan Herald

ನೋಯ್ಡಾ: ಹ್ಯಾಟ್ರಿಕ್ ಜಯದೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮತ್ತೊಂದು ಹ್ಯಾಟ್ರಿಕ್‌ ಜಯದ ಕನಸಿನೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ.

ಶಹೀದ್ ವಿಜಯ್ ಸಿಂಗ್ ಪಾಠಕ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬುಲ್ಸ್‌, ಆತಿಥೇಯ ಯು.ಪಿ.ಯೋಧಾವನ್ನು ಎದುರಿಸಲಿದೆ. ‘ಬಿ’ ವಲಯದಲ್ಲಿರುವ ಬುಲ್ಸ್‌ ಆರನೇ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿತ್ತು. ನಂತರ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ಎದೆಗುಂದದ ತಂಡ ಅಕ್ಟೋಬರ್‌ 31ರಂದು ಪಟ್ನಾ ಪೈರೇಟ್ಸ್ ಮತ್ತು ನವೆಂಬರ್ ಮೂರರಂದು ಯು.ಪಿ.ಯೋಧಾವನ್ನು ಮಣಿಸಿತ್ತು. ಆರು ಪಂದ್ಯಗಳನ್ನು ಆಡಿರುವ ತಂಡದ ಖಾತೆಯಲ್ಲಿ ಈಗ 26 ಪಾಯಿಂಟ್‌ಗಳಿವೆ. ಯು.ಪಿ.ಯೋಧಾ 11 ಪಂದ್ಯಗಳನ್ನು ಆಡಿದ್ದು 28 ಪಾಯಿಂಟ್‌ಗಳೊಂದಿಗೆ ಪಟ್ಟಿಯ ಅಗ್ರ ಸ್ಥಾನದಲ್ಲಿದೆ.

ತವರಿನಲ್ಲಿ ಕಳೆದ ವಾರ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಲು ಸಜ್ಜಾಗಿರುವ ಯೋಧಾಗೆ ಕನ್ನಡಿಗರಾದ ರಿಷಾಂಕ್ ದೇವಾಡಿಗ ಮತ್ತು ಪ್ರಶಾಂತ್ ಕುಮಾರ್ ರೈ ಅವರ ಬಲವಿದೆ. ಜೀವ ಕುಮಾರ್‌, ರೋಹಿತ್ ಚೌಧರಿ, ಸಚಿನ್ ಕುಮಾರ್‌, ಆಜಾದ್ ಸಿಂಗ್ ಮತ್ತು ಬಾನು ಪ್ರತಾಪ್ ತೋಮರ್ ಕೂಡ ತಂಡದ ಭರವಸೆಯಾಗಿದ್ದಾರೆ.

ರೋಹಿತ್ ಕುಮಾರ್ ಅವರ ನಾಯಕತ್ವದ ಬುಲ್ಸ್‌ ಪರವಾಗಿ ಕಾಶಿಲಿಂಗ್ ಅಡಕೆ, ಪವನ್ ಕುಮಾರ್‌ ಶೆರಾವತ್‌ ಮತ್ತು ರೋಹಿತ್ ಈ ವರೆಗೆ ಉತ್ತಮ ಆಟವಾಡಿದ್ದು ಗುರುವಾರವೂ ಮಿಂಚುವ ಭರವಸೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !