ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಜಯಭೇರಿ

7

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಜಯಭೇರಿ

Published:
Updated:

ಅಹಮದಾಬಾದ್: ಪವನ್ ಕುಮಾರ್ ಅವರ ಚುರುಕಿನ ದಾಳಿಯ ಪರಿಣಾಮದಿಂದ ಬೆಂಗಳೂರು ಬುಲ್ಸ್‌ ತಂಡವು ಭಾನುವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಜಯಭೇರಿ ಬಾರಿಸಿತು.

ಪವನಕುಮಾರ್ ಅವರು ರೇಡಿಂಗ್‌ನಲ್ಲಿ 18 ಪಾಯಿಂಟ್ಸ್‌ ಗಳಿಸಿದರು. ಅಲ್ಲದೇ ಒಂದು ಬೋನಸ್‌ ಅಂಕವನ್ನೂ ತಮ್ಮ ತಂಡಕ್ಕೆ ಕಾಣಿಕೆಯಾಗಿ ನೀಡಿದರು. ಇದರಿಂದಾಗಿ ಬುಲ್ಸ್‌ ತಂಡವು 45–32ರಿಂದ ಪ್ಯಾಂಥರ್ಸ್‌ ಎದುರು ಜಯಿಸಿತು.

ಅವರಿಗೆ ಉತ್ತಮ ಜೊತೆ ನೀಡಿದ ಅನುಭವಿ ಆಟಗಾರ ಕಾಶಿಲಿಂಗ ಅಡಕೆ ಐದು ಮತ್ತು ರೋಹಿತ್ ಕುಮಾರ್ ಮೂರು ಅಂಕ ಗಳಿಸಿದರು. ಸಂದೀಪ್ ಎರಡು ಪಾಯಿಂಟ್‌ಗಳನ್ನು ಟ್ಯಾಕಲ್‌ನಲ್ಲಿ ಕೊಳ್ಳೆ ಹೊಡೆದರು.  ಬುಲ್ಸ್‌ ತಂಡವು ಆರಂಭದಿಂದಲೇ ಉತ್ತಮವಾಗಿ ಆಡಿತು. ಸಂಘಟಿತ ಹೋರಾಟದ ಫಲವಾಗಿ ಅಂಕ ಗಳಿಕೆಯಲ್ಲಿ ಎದುರಾಳಿ ತಂಡಕ್ಕಿಂತ ಹೆಚ್ಚು ಅಂತರ ಕಾಪಾಡಿಕೊಂಡಿತು.

ಪ್ಯಾಂಥರ್ಸ್‌ ತಂಡದ ದೀಪಕ್ ನಿವಾಸ್ ಹೂಡಾ ಒಂಬತ್ತು ರೇಡ್ ಮತ್ತು ಎರಡು ಬೋನಸ್‌  ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡರು.  ಅಜಿಂಕ್ಯ ಪವಾರ್  ಆಲ್‌ರೌಂಡ್ (ರೇಡಿಂಗ್ 4, ಟ್ಯಾಕಲ್ 1, ಬೋನಸ್‌ 2) ಆಟವಾಡಿದರು. ಡೇವಿಡ್ ಮೊಸಾಮ್‌ಬೇಯ್ ಮೂರು ಪಾಯಿಂಟ್ ಗಳಿಸಿದರು. ಮೋಹಿತ್ ಚಿಲ್ಲಾರ್ ಎರಡು ಟ್ಯಾಕಲ್ ಅಂಕ ಪಡೆದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !