ಗುರುವಾರ , ಅಕ್ಟೋಬರ್ 6, 2022
26 °C

ಬಿಡಬ್ಲ್ಯುಎಫ್‌ನಲ್ಲಿ ಲಿಂಗ, ಪ್ರಾದೇಶಿಕ ಪ್ರಾತಿನಿಧ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಾದೇಶಿಕ ಮತ್ತು ಲಿಂಗ ಪ್ರಾತಿನಿಧ್ಯಕ್ಕೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಮುಂದಾಗಿದ್ದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇದನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಅಧ್ಯಕ್ಷರ ಸ್ಥಾನವನ್ನು ನಾಲ್ಕು ಅವಧಿಗೆ ಸೀಮಿತಗೊಳಿಸುವ ನಿರ್ಧಾರವನ್ನೂ ಕೈಗೊಂಡಿದೆ.

ಶನಿವಾರ ಆನ್‌ಲೈನ್ ಮೂಲಕ ನಡೆದ ಸಾಮಾನ್ಯ ಸಭೆಯಲ್ಲಿ ಸಂವಿಧಾನದಲ್ಲಿ ಬದಲಾವಣೆ ಮಾಡಲು ಸದಸ್ಯರು ಒಪ್ಪಿಗೆ ಸೂಚಿಸಿದರು. ಇದರ ಪ್ರಕಾರ ಇನ್ನು ಮುಂದೆ ಕನಿಷ್ಠ ಶೇಕಡಾ 30 ಲಿಂಗ ಪ್ರಾತಿನಿಧ್ಯ ಮತ್ತು ಉಪಖಂಡಗಳ ಪ್ರಾತಿನಿಧ್ಯ ಸಿಗಲಿದೆ. 

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಪ್ರಮುಖ ಸ್ಥಾನಗಳಲ್ಲಿ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳುವಂತೆ ಈಚೆಗೆ ತನ್ನ ಎಲ್ಲ ರಾಷ್ಟ್ರೀಯ ಸಮಿತಿಗಳಿಗೆ ಸೂಚಿಸಿತ್ತು. ಈ ವರ್ಷಾಂತ್ಯದಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದೂ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಫ್‌ ಇಂಥ ಚಿಂತನೆ ನಡೆಸಿದೆ. ಪ್ಯಾರಾ ಬ್ಯಾಡ್ಮಿಂಟನ್ ಅಥ್ಲೀಟ್‌ಗಳ ಆಯೋಗವನ್ನು ಸೇರ್ಪಡೆಗೊಳಿಸುವುದಕ್ಕೂ ಮುಂದಾಗಿದೆ.

ಸದಸ್ಯ ಸಂಸ್ಥೆಗಳು ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿರುವುದು ಸಂತೋಷದ ವಿಷಯ. ಫೆಡರೇಷನ್‌ನ ಸಂವಿಧಾನ ತಿದ್ದುಪಡಿ ಮಾಡುವ ಈ ನಿರ್ಣಯವು ಕ್ರಾಂತಿಕಾರಕ. ಫೆಡರೇಷನ್ ಆಡಳಿತಕ್ಕೆ ಚುರುಕು ತಂಬಲು ಇದು ನೆರವಾಗಲಿದೆ‘ ಎಂದು ಅಧ್ಯಕ್ಷ ಪಾಲ್ ಹೆರಿಕ್ ಹೋಯರ್ ಅಭಿಪ್ರಾಯಪಟ್ಟರು.

’ಪ್ರತಿವರ್ಷ ಜುಲೈ 31ರ ಒಳಗೆ ಸಾಮಾನ್ಯ ಸಭೆ ನಡೆಸಲು ಬೇಕಾದ ಆಡಳಿತ ಸಂಪನ್ಮೂಲ ಗಳಿಸಲು ಬೇಕಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಸಾಮಾನ್ಯ ಸಭೆ ಅನುಮತಿ ನೀಡಿದೆ. ಆಡಳಿತ ಸುಧಾರಣೆಗಾಗಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ಫೆಡರೇಷನ್ ಈಗ ಮುಕ್ತವಾಗಿದೆ‘ ಎಂದು ಅವರು ತಿಳಿಸಿದರು.

ಒಲಿಂಪಿಕ್ಸ್‌ಗೆ ಸಂಬಂಧಸಿದ ಅಂತರರಾಷ್ಟ್ರೀಯ ಫೆಡರೇಷನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬಿಡಬ್ಲ್ಯುಎಫ್‌ ಮೂರನೇ ಸ್ಥಾನದಲ್ಲಿದೆ. ಇದು ಉತ್ತಮ ಆಡಳಿತಕ್ಕೆ ಸಂದ ಗೌರವ. ಬ್ಯಾಡ್ಮಿಂಟನ್‌ ಕ್ರೀಡೆಯ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ‘ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು