ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಪ್ರಶಸ್ತಿ ಪೈಪೋಟಿ ಟೈ ಬ್ರೇಕರ್‌ಗೆ

Last Updated 28 ನವೆಂಬರ್ 2018, 18:46 IST
ಅಕ್ಷರ ಗಾತ್ರ

ಲಂಡನ್‌: ಮೂರು ಬಾರಿಯ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್‌ ಮತ್ತು ಅಮೆರಿಕದ ಫ್ಯಾಬಿಯಾನೊ ಕರ್ವಾನ ನಡುವಿನ ಟೈ ಬ್ರೇಕರ್ ಪಂದ್ಯಕ್ಕೆ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಕಣ ಸಜ್ಜಾಗಿದೆ.

ಇವರಿಬ್ಬರ ನಡುವಿನ ಫೈನಲ್‌ ಪಂದ್ಯದ 12 ಗೇಮ್‌ಗಳಲ್ಲಿ ಫಲಿತಾಂಶ ಬಾರದ ಕಾರಣ ಟೈಬ್ರೇಕರ್‌ಗೆ ಮೊರೆ ಹೋಗಲಾಗಿದೆ. ಇದರಲ್ಲಿ ತಲಾ 25 ನಿಮಿಷಗಳ ನಾಲ್ಕು ರ‍್ಯಾಪಿಡ್ ಪಂದ್ಯಗಳು ಇರುತ್ತವೆ. ಇದರಲ್ಲೂ ಟೈ ಆದರೆ ಇಬ್ಬರೂ ಐದು ಮಿನಿ ಗೇಮ್‌ಗಳನ್ನು ಆಡಲಿದ್ದಾರೆ. ಇದರಲ್ಲಿ ಐದು ನಿಮಿಷಗಳ ತಲಾ ಎರಡು ಬ್ಲಿಡ್ಜ್‌ ಗೇಮ್‌ಗಳು ಇರುತ್ತವೆ.

ಆ ನಂತರವೂ ಟೈ ಆದರೆ ಸಡನ್ ಡೆತ್ ಮೂಲಕ ಫಲಿತಾಂಶ ನಿರ್ಣಯಿಸಲಾಗುವುದು. ಬಿಳಿ ಕಾಯಿಯಲ್ಲಿ ಆಡುವವರಿಗೆ ಐದು ನಿಮಿಷ ಮತ್ತು ಕ‍ಪ್ಪು ಕಾಯಿಯಲ್ಲಿ ಆಡುವವರಿಗೆ ನಾಲ್ಕು ನಿಮಿಷಗಳ ಅವಧಿ ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT