ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಹಾಕಿ: ಪಾಕ್‌ಗೆ ವಿಘ್ನ?

Last Updated 8 ನವೆಂಬರ್ 2018, 20:27 IST
ಅಕ್ಷರ ಗಾತ್ರ

ಕರಾಚಿ: ಆರ್ಥಿಕ ಸಂಕಷ್ಟ ದಿಂದಾಗಿ ಪಾಕಿಸ್ತಾನ ಹಾಕಿ ತಂಡ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊ ಳ್ಳುವ ಸಾಧ್ಯತೆಗಳು ಕಡಿಮೆ ಎಂದು ಹಾಕಿ ತಂಡದ ಕೋಚ್‌ ತಾಕಿರ್ ದಾರ್‌ ಮತ್ತು ವ್ಯವಸ್ಥಾಪಕ ಹಸನ್ ಸರ್ದಾರ್‌ ಹೇಳಿದ್ದಾರೆ.

ಭುವನೇಶ್ವರದಲ್ಲಿ ಇದೇ 28ರಂದು ವಿಶ್ವಕಪ್ ಆರಂಭ ವಾಗಲಿದೆ. ಇದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆರ್ಥಿಕ ನೆರವು ನೀಡುವಂತೆ ಅಲ್ಲಿನ ಹಾಕಿ ಸಂಸ್ಥೆಯು ಕ್ರಿಕೆಟ್ ಮಂಡಳಿಯನ್ನು ಕೋರಿತ್ತು. ಆದರೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಮಂಡಳಿ ಗುರುವಾರ ಹೇಳಿದೆ.

‘ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ನಿರಂತವಾಗಿ ಮನವಿ ಮಾಡಲಾಗಿತ್ತು. ಆದರೆ ಪೂರಕ ಸ್ಪಂದನೆ ಸಿಗಲಿಲ್ಲ. ಈ ಕುರಿತು ಅಂತಿಮ ನಿರ್ಧಾರ ಈ ವಾರದ ಒಳಗೆ ಆಗಬೇಕು. ತಂಡವನ್ನು ವಿಶ್ವಕಪ್‌ಗೆ ಕಳುಹಿಸಲು ಸಾಧ್ಯವಾಗದಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಾಕಿಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲಿದೆ. ಭಾರಿ ಮೊತ್ತದ ದಂಡ ತೆರಬೇಕಾದ ಪರಿಸ್ಥಿತಿಯೂ ಒದಗಲಿದೆ’ ಎಂದು ಪಾಕಿಸ್ತಾನ ಹಾಕಿ ಫೆಡರೇಷನ್‌ ಕಾರ್ಯದರ್ಶಿ ಶೆಹಬಾಜ್‌ ಅಹಮ್ಮದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT