ಬುಧವಾರ, ನವೆಂಬರ್ 13, 2019
22 °C
2022ರ ಕ್ರೀಡೆಗಳಿಗೆ ಬಹಿಷ್ಕರದ ಪ್ರಸ್ತಾವ

ಐಒಎ ಜೊತೆ ಮಾತುಕತೆಗೆ ಸಿಜಿಎಫ್‌ ಮುಖ್ಯಸ್ಥ ಭಾರತಕ್ಕೆ

Published:
Updated:

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆ ಜೊತೆ ಮಾತುಕತೆ ನಡೆಸಲು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್) ಅಧ್ಯಕ್ಷ ಲೂಯಿ ಮಾರ್ಟಿನ್‌ ನ. 13ರಂದು ಇಲ್ಲಿಗೆ ಬರಲಿದ್ದಾರೆ. 

ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡೆಗಳ ಪಟ್ಟಿಯಿಂದ ಶೂಟಿಂಗ್‌ ಕೈಬಿಟ್ಟಿರುವುದನ್ನು ವಿರೋಧಿಸಿ ಭಾರತವು ಕ್ರೀಡೆಗಳನ್ನು ಬಹಿಷ್ಕರಿಸಲು ಉದ್ದೇಶಿಸಿರುವುದರ ಹಿನ್ನೆಲೆಯಲ್ಲಿ ಮಾತುಕತೆ ನಡೆಯಲಿದೆ.

ಸಿಜಿಎಫ್‌ ಸಿಇಒ ಡೇವಿಡ್‌ ಗ್ರೆವೆಂಬರ್ಗ್ ಮತ್ತು ಮಾಧ್ಯಮ ಮತ್ತು ಸಂವಹನ ಮ್ಯಾನೇಜರ್‌ ಟಾಮ್‌ ಡೆಗುನ್‌ ಅವರೂ ಎರಡು ದಿನಗಳ ಭೇಟಿ ವೇಳೆ ಮಾರ್ಟಿನ್‌ ಜೊತೆಗಿರಲಿದ್ದಾರೆ.

ನ.14ರಂದು ಮಾತುಕತೆ ನಡೆಯಲಿದೆ. ಭಾರತೀಯ ನಿಯೋಗದ ನೇತೃತ್ವವನ್ನು ಐಒಎ ಅಧ್ಯಕ್ಷ ನರೀಂದರ್‌ ಬಾತ್ರ ವಹಿಸಲಿದ್ದು, ಮಹಾ ಕಾರ್ಯದರ್ಶಿ ರಾಜೀವ್ ಮೆಹ್ತಾ ಭಾಗವಹಿಸಲಿದ್ದಾರೆ. ಅದೇ ದಿನ ಮಾರ್ಟಿನ್‌ ಮತ್ತು ಸಿಇಒ ಅವರು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರನ್ನು ಭೇಟಿಯಾಗಲಿದ್ದಾರೆ.

ಪ್ರತಿಕ್ರಿಯಿಸಿ (+)