ಬಿಲಿಯರ್ಡ್ಸ್‌: ಈಶ್‌ಪ್ರೀತ್‌ ಜಯಭೇರಿ

7

ಬಿಲಿಯರ್ಡ್ಸ್‌: ಈಶ್‌ಪ್ರೀತ್‌ ಜಯಭೇರಿ

Published:
Updated:
Prajavani

ಬೆಂಗಳೂರು: ತಮ್ಮದೇ ಸಂಸ್ಥೆಯ ಧ್ರುವ ಸಿತ್ವಾಲ ಅವರನ್ನು ಮಣಿಸಿದ ಜಿಎಐಎಲ್‌ನ ಈಶ್‌ಪ್ರೀತ್ ಛಡ್ಡಾ ಇಲ್ಲಿ ನಡೆಯುತ್ತಿರುವ ಪಿಎಸ್‌ಪಿ ಅಂತರ ಸಂಸ್ಥೆ ಬಿಲಿಯರ್ಡ್ಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರು. ಕೆಎಸ್‌ಬಿಎ ಸಭಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಂಕಜ್ ಅಡ್ವಾಣಿ ಕೂಡ ಮುಂದಿನ ಹಂತಕ್ಕೆ ಪ್ರವೇಶಿಸಿದರು.

ಓಎನ್‌ಜಿಸಿಯನ್ನು ಪ್ರತಿನಿಧಿಸುತ್ತಿರುವ ಅಡ್ವಾಣಿ ಭಾರತ್ ಪೆಟ್ರೋಲಿಯಂನ ಮನನ್ ಚಂದ್ರ ಎದುರು 3–0ಯಿಂದ ಗೆದ್ದರು. ಆದಿತ್ಯ ಮೆಹ್ತಾ, ಬಿಪಿಸಿಎಲ್‌ನ ದೇವೇಂದ್ರ ಜೋಶಿ ವಿರುದ್ಧ 3–0ಯಿಂದ ಗೆದ್ದರು. ಈಶ್‌ಪ್ರೀತ್ ಛಡ್ಡಾ 3–1ರಿಂದ ಧ್ರುವ ಸಿತ್ವಾಲ ಅವರನ್ನು ಮಣಿಸಿದರು. ಐಒಸಿಯ ಸ್ಪರ್ಶ ಫೇರ್ವಾನಿ, ಓಎನ್‌ಜಿಸಿಯ ದಿಗ್ವಿಜಯ್‌ ವಿರುದ್ಧ 3–0ಯಿಂದ ಗೆದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !