ಚಾಂಪಿಯನ್ನರು ಸೆಮಿಫೈನಲ್‌ಗೆ

7
ಮೂರು ಕ್ವಾರ್ಟರ್‌ಗಳಲ್ಲಿ ಲಭಿಸಿದ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು

ಚಾಂಪಿಯನ್ನರು ಸೆಮಿಫೈನಲ್‌ಗೆ

Published:
Updated:
Deccan Herald

ಭುವನೇಶ್ವರ: ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಗಳಿಸಿದ ಮೂರು ಗೋಲುಗಳು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾಗೆ ಭರ್ಜರಿ ಜಯ ಗಳಿಸಿಕೊಟ್ಟಿತು. ವಿಶ್ವಕಪ್ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರಾನ್ ಜಲೆವ್‌ಸ್ಕಿ ಬಳಗ, ಫ್ರಾನ್ಸ್ ವಿರುದ್ಧ 3–0ಯಿಂದ ಗೆದ್ದಿತು.

ಚಾಂಪಿಯನ್ನರಿಗೆ ಮೊದಲ ಕ್ವಾರ್ಟರ್‌ನ ಮೊದಲ ಕೆಲವು ನಿಮಿಷ ಫ್ರಾನ್ಸ್ ಭಾರಿ ಪೈಪೋಟಿ ಒಡ್ಡಿತು. ಆದರೆ ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನೀಡಿ ಕೈಸುಟ್ಟುಕೊಂಡಿತು. ಜೆರೆಮಿ ಹೇವಾರ್ಡ್ ಗೋಲು ಗಳಿಸಿ ಮಿಂಚಿದರು. ನಂತರ ಆಧಿಪತ್ಯ ಸ್ಥಾಪಿಸಿದ ಆಸ್ಟ್ರೇಲಿಯಾ ಆರು ಬಾರಿ ಎದುರಾಳಿಗಳ ಆವರಣಕ್ಕೆ ನುಗ್ಗಿ ಆತಂಕ ಮೂಡಿಸಿತು.

ಎರಡನೇ ಕ್ವಾರ್ಟರ್‌ನಲ್ಲೂ ಆಸ್ಟ್ರೇಲಿಯಾದ ಪ್ರಾಬಲ್ಯ ಮುಂದುವರಿಯಿತು. 19ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬ್ಲೇಕ್ ಗೋವರ್ಸ್ ಗೋಲು ಗಳಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾಗೆ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. 37ನೇ ನಿಮಿಷದಲ್ಲಿ ಲಭಿಸಿದ ಈ ಅವಕಾಶದಲ್ಲಿ ಅರಾನ್ ಜಲೆವ್‌ಸ್ಕಿ ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !