ಚಂದ್ರಾ, ಜಿಆರ್‌ವಿಯಿಂದ ‘ಗೂಗ್ಲಿ ಸ್ವಿಂಗ್‌ ಸರ್ಚ್’

7

ಚಂದ್ರಾ, ಜಿಆರ್‌ವಿಯಿಂದ ‘ಗೂಗ್ಲಿ ಸ್ವಿಂಗ್‌ ಸರ್ಚ್’

Published:
Updated:
Prajavani

ಬೆಂಗಳೂರು: ಹಿರಿಯ ಕ್ರಿಕೆಟಿಗರಾದ ಬಿ.ಎಸ್. ಚಂದ್ರಶೇಖರ್ ಮತ್ತು ಜಿ.ಆರ್. ವಿಶ್ವನಾಥ್  ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ನೀಡಲು ಗೂಗ್ಲಿ ಸ್ವಿಂಗ್ ಸರ್ಚ್ ಯೋಜನೆ ಆರಂಭಿಸಲಿದ್ದಾರೆ.

 ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಯೋಜನೆಯನ್ನು ಚಂದ್ರಶೇಖರ್ ರೂಪಿಸಿದ್ದಾರೆ.  ದಿಗ್ಗಜ ಬ್ಯಾಟ್ಸ್‌ಮನ್ ಜಿ.ಆರ್. ವಿಶ್ವನಾಥ್ ಕೂಡ ಈ ಯೋಜನೆಗೆ ಕೈಜೋಡಿಸಿದ್ದಾರೆ. ನಮ್ಮ ಸಂಸ್ಥೆಯಿಂದ ಎಲ್ಲ ಸಹಕಾರವನ್ನೂ ನೀಡುತ್ತಿದ್ದೇವೆ’ ಎಂದರು.

‘ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗುತ್ತಿದೆ. ನಾಲ್ಕು ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ. 16 ವರ್ಷದೊಳಗಿನ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಬಾಲಕ ಮತ್ತು ಬಾಲಕಿಯರಿಬ್ಬರಿಗೂ ಅವಕಾಶ ವಿದೆ. ಆಯ್ಕೆ ಪ್ರಕ್ರಿಯೆಯ ದಿನಾಂಕ ಮತ್ತಿತರ ವಿಷಯಗಳನ್ನು ತಿಳಿಸಲಾಗುವುದು’ ಎಂದರು.

ಈ ಸಂದರ್ಭಧಲ್ಲಿ ಬಿ.ಎಸ್. ಚಂದ್ರಶೇಖರ್, ಅವರ ಪತ್ನಿ ಸಂಧ್ಯಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !