ಚೆಸ್‌: ಮುನ್ನಡೆಯಲ್ಲಿ ಬಾಲಕಿಶನ್‌

7

ಚೆಸ್‌: ಮುನ್ನಡೆಯಲ್ಲಿ ಬಾಲಕಿಶನ್‌

Published:
Updated:

ಕಲಬುರ್ಗಿ: ಬೆಂಗಳೂರಿನ ಎ.ಬಾಲಕಿಶನ್ ಇಲ್ಲಿನ ಎಸ್‌.ಆರ್‌.ಎನ್. ಮೆಹತಾ ಶಾಲೆಯಲ್ಲಿ ಆಯೋಜಿಸಿರುವ 25 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನಲ್ಲಿ ಮೈಸೂರಿನ ಎಲ್‌.ವಿವೇಕಾನಂದ ಅವರನ್ನು ಮಣಿಸುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಾಲಕಿಶನ್ ಒಟ್ಟು ಆರು ಪಾಯಿಂಟ್ಸ್ ಗಳಿಸಿದ್ದಾರೆ. ಅವರು ನಾಲ್ಕನೇ ಸುತ್ತಿನಲ್ಲಿ ಶಿವಮೊಗ್ಗದ ಎಸ್‌.ಎಂ.ಅಜಯ್‌, ಐದನೇ ಸುತ್ತಿನಲ್ಲಿ ಬೆಂಗಳೂರಿನ ಆರ್‌.ಪಾರ್ಥಸಾರಥಿ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಅಗ್ರ ರೇಟಿಂಗ್ಸ್ (2226) ಹೊಂದಿರುವ ಬೆಂಗಳೂರಿನ ಓಜಸ್ ಕುಲಕರ್ಣಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆರನೇ ಸುತ್ತಿನಲ್ಲಿ ಧಾರವಾಡದ ಶ್ರೀಯಾ ಆರ್‌.ರೇವಣಕರ್‌, ಐದನೇ ಸುತ್ತಿನಲ್ಲಿ ಮಂಡ್ಯದ ವಿ.ಪಿ.ಎಸ್.ದರ್ಶನ್ ಮತ್ತು ನಾಲ್ಕನೇ ಸುತ್ತಿನಲ್ಲಿ ಕಲಬುರ್ಗಿ ಓವೈಸ್ ಮಹಮ್ಮದ್ ವಿರುದ್ಧ ಜಯಿಸಿದರು.

ಆರನೇ ಸುತ್ತಿನಲ್ಲಿ ದಕ್ಷಿಣ ಕನ್ನಡದ ಚಿರಾಗ್ ಮುದ್ರಾಜೆ ಕಲಬುರ್ಗಿಯ ನಮನ್ ಸೇಥಿಯಾ ಮೇಲೆ, ಬೆಂಗಳೂರಿನ ಬಿ.ಎಂ.ಸುಜಯ್ ಕಲಬುರ್ಗಿಯ ಅನುರೂಪ್ ಯು.ನಾಯರ್ ಮತ್ತು ರಾಯಚೂರಿನ ಶ್ರೀನಿಧಿ ಕುಲಕರ್ಣಿ ಬಳ್ಳಾರಿಯ ಬಿ.ವಿನಯ್ ಅವರನ್ನು ಸೋಲಿಸಿದರು. ಇವರು ತಲಾ ಐದು ಪಾಯಿಂಟ್ಸ್ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !