ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋಫ್ಲಾಟ್‌ ಓಪನ್‌ ಚೆಸ್‌ ಟೂರ್ನಿ: ಭರತ್‌ ಪರಾಭವ

Last Updated 24 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಮಾಸ್ಕೊ : ಏರೋಫ್ಲಾಟ್‌ ಚೆಸ್‌ ಟೂರ್ನಿಯಲ್ಲಿ ಭಾರತದ ಯುವ ಚೆಸ್ ಆಟಗಾರ ಭರತ್‌ ಸುಬ್ರಮಣ್ಯಂ ಸೋಲು ಅನುಭವಿಸಿದ್ದಾರೆ. ಭಾನುವಾರ ತಡರಾತ್ರಿ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ಅವರು ಅಜರ್‌ಬೈಜಾನ್‌ನ ಗ್ರ್ಯಾಂಡ್‌ಮಾಸ್ಟರ್‌ ರವೂಫ್‌ ಮಮೆದೊವ್‌ ಅವರಿಗೆ ಮಣಿದರು.

51ನೇ ನಡೆಯಲ್ಲಿ ಗೆದ್ದ ಮಮೆದೊವ್‌ 4.5 ಪಾಯಿಂಟ್ಸ್‌ಗಳೊಂದಿಗೆ ಟೂರ್ನಿಯ ಅಗ್ರಸ್ಥಾನಕ್ಕೇರಿದರು.

ಅರ್ಮೆನಿಯಾದ ಮ್ಯಾನ್ಯುಯೆಲ್‌ ಪೆಟ್ರೊಸ್ಯಾನ್‌ ಅವರು ಭಾರತದ ಎಸ್‌.ಪಿ.ಸೇತುರಾಮನ್‌ ಅವರನ್ನು ಮಣಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಸುಬ್ರಮಣ್ಯಂ, ಬಿ.ಅದಿಬನ್‌ ಹಾಗೂ ಅರವಿಂದ್‌ ಚಿದಂಬರಮ್‌ (ತಲಾ 3.5 ಪಾಯಿಂಟ್ಸ್‌) ಜಂಟಿ ಮೂರನೇ ಸ್ಥಾನ ಹೊಂದಿದ್ದಾರೆ.

ಐದನೇ ಸುತ್ತಿನಲ್ಲಿ ಅದಿಬನ್‌ ಅವರುಅಲೆಕ್ಸೆಜ್‌ ಅಲೆಕ್ಸಾಂಡರ್‌ ಅವರೊಂದಿಗೆ ಡ್ರಾ ಸಾಧಿಸಿದರೆ, ಚಿದಂಬರಂ ಅವರು ವಹಾಪ್‌ ಸನಾಲ್‌ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT