ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಪ್ರಮುಖ ಆಟಗಾರರ ಮುನ್ನಡೆ

25 ವರ್ಷದೊಳಗಿನವರ ರಾಜ್ಯ ಚೆಸ್‌ ಚಾಂಪಿಯನ್‌ಷಿಪ್‌
Last Updated 5 ಜುಲೈ 2019, 17:36 IST
ಅಕ್ಷರ ಗಾತ್ರ

ಕಲಬುರ್ಗಿ:ಮಂಗಳೂರಿನ ಶಾಬ್ದಿಕ್‌ ವರ್ಮಾ ಸೇರಿದಂತೆ ಪ್ರಮುಖ ಆಟ ಗಾರರು,ಗುಲಬರ್ಗಾ ಜಿಲ್ಲಾ ಚೆಸ್ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿನ ಶುಕ್ರವಾರ ಇಲ್ಲಿ ಆರಂಭವಾದ 25 ವರ್ಷದೊಳಗಿನವರ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ ನಂತರ ತಲಾ ಮೂರು ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ಶರಣಬಸವೇಶ್ವರ ರೆಸಿಡೆನ್ಶಿಯಲ್‌ ಪಬ್ಲಿಕ್‌ ಶಾಲೆಯಲ್ಲಿ ಶುಕ್ರವಾರ ಆರಂಭವಾದ ಈ ಮೂರು ದಿನಗಳ ಟೂರ್ನಿಯಲ್ಲಿಎರಡನೇ ಶ್ರೇಯಾಂಕದ ವರ್ಮಾ ಜೊತೆ ಅಗ್ರ ಶ್ರೇಯಾಂಕದ ಗಹನ್‌ ಎಂ.ಜಿ. (ಮಂಗಳೂರು), ಮೂರನೇ ಶ್ರೇಯಾಂಕದ ರಜತ್‌ ಐತಾಳ್‌ (ಶಿವಮೊಗ್ಗ), ಕಲಬುರ್ಗಿಯ ಹರ್ಷ್‌ ಎಂ.ಅವೇರಿ, ದಾಮೋದರ ಮುಂಡ್ರಿಕೇರಿ, ವಿನೀತ್ ಎಂ., ರಾಯಚೂರಿನ ಶ್ರೀನಿಧಿ ಕುಲಕರ್ಣಿ, ಪುತ್ತೂರಿನ ಪ್ರಶಾಂತ್‌ ನಾಯಕ್‌ ಅವರೂ ಗರಿಷ್ಠ ಮೂರು ಅಂಕ ಗಳಿಸಿದವರಲ್ಲಿ ಒಳಗೊಂಡಿದ್ದಾರೆ.

ಬೆಂಗಳೂರಿನ ಸುಜಯ್‌ ಬಿ.ಎಂ., ಶಿರ್ಸಿಯ ನಿತೀಶ್‌ಭಟ್‌, ಶಿವಮೊಗ್ಗದ ಅಜಯ್‌ ಎಸ್‌.ಎಂ., ಚಿತ್ರದುರ್ಗದ ತೇಜಸ್ವಿ ಎನ್‌., ದಕ್ಷಿಣ ಕನ್ನಡ ಲಕ್ಷಿತ್‌ ಬಿ.ಸಾಲಿಯಾನ್‌ ಕೂಡ ಮೂರು ಅಂಕ ಗಳಿಸಿದ್ದಾರೆ. ವಿವಿಧ ಜಿಲ್ಲೆಗಳ 119 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ ಎಂದು ಗುಲಬರ್ಗಾ ಜಿಲ್ಲಾ ಚೆಸ್ ಅಸೋಸಿ ಯೇಷನ್ ಅಧ್ಯಕ್ಷ ಪ್ರಮೋದ್‌ ಮೋರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT