ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಪೆಂಡೆನ್ಸ್ ಚಾಲೆಂಜ್‌ ಚೆಸ್‌ ಟೂರ್ನಿ: ಅನ್ವಿತ್‌, ಆದಿತ್ಯಗೆ ಪ್ರಶಸ್ತಿ

Last Updated 14 ಆಗಸ್ಟ್ 2022, 16:34 IST
ಅಕ್ಷರ ಗಾತ್ರ

ಬೆಂಗಳೂರು: ಅನ್ವಿತ್ ಪಿ. ಭಟ್ ಹಾಗೂ ಆದಿತ್ಯ ಟ್ರೆಹಾನ್ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಇಂಡಿಪೆಂಡೆನ್ಸ್ ಚಾಲೆಂಜ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು.

ಭಾನುವಾರ ನಡೆದ ಟೂರ್ನಿಯ 10 ವರ್ಷದೊಳಗಿನವರ ವಿಭಾಗದ ಐದು ಸುತ್ತುಗಳಲ್ಲಿ ಐದು ಪಾಯಿಂಟ್ಸ್ ಕಲೆಹಾಕಿದ ಅನ್ವಿತ್ ಅಗ್ರಸ್ಥಾನ ಗಳಿಸಿದರು. ಅವನಿ (4 ಪಾಯಿಂಟ್ಸ್) ಹಾಗೂ ಆರ್ಯನ್‌ ಯತೀಶ್ (4) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

16 ವರ್ಷದೊಳಗಿನವರ ವಿಭಾಗದಲ್ಲಿ ಆದಿತ್ಯ ಚಾಂಪಿಯನ್ ಆದರು. ಆದಿತ್ಯ ಎಲ್ಲ ಐದು ಪಾಯಿಂಟ್ಸ್ ಗಳಿಸಿದರು. ತರುಣ್‌ ಪಿ.ಎಂ. (4) ಮತ್ತು ಶ್ರೀವರ್ಧನ್‌ (3) ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT