ಚೆಸ್‌: ಭಾರತ ತಂಡಗಳಿಗೆ ಜಯ

7

ಚೆಸ್‌: ಭಾರತ ತಂಡಗಳಿಗೆ ಜಯ

Published:
Updated:

ಬತುಮಿ, ಜಾರ್ಜಿಯಾ: ಭಾರತದ ಪುರುಷರ ಮತ್ತು ಮಹಿಳಾ ತಂಡದವರು 43ನೇ ಚೆಸ್‌ ಒಲಿಂಪಿಯಾಡ್‌ನ ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಗುರುವಾರ ನಡೆದ ಪುರುಷರ ವಿಭಾಗದ ಹಣಾಹಣಿಯಲ್ಲಿ ಭಾರತ 3–1ಯಿಂದ ನೆದರ್ಲೆಂಡ್ಸ್‌ ತಂಡವನ್ನು ಪರಾಭವಗೊಳಿಸಿತು.

ಮೊದಲ ಸುತ್ತಿನಲ್ಲಿ ಪಿ.ಹರಿಕೃಷ್ಣಾ, ಅನಿಶ್‌ ಗಿರಿ ವಿರುದ್ಧ ಡ್ರಾ ಮಾಡಿಕೊಂಡರು. ಎರಡನೇ ಸುತ್ತಿನಲ್ಲಿ ಬಿ.ಅದಿಬಾನ್‌, ಲೊಯೆಕ್‌ ವ್ಯಾನ್‌ ವೆಲಿ ವಿರುದ್ಧ ಗೆದ್ದರು. ನಂತರದ ಸುತ್ತಿನಲ್ಲಿ ಕೃಷ್ಣನ್‌ ಶಶಿಕಿರಣ್‌, ಜೋರ್ಡನ್‌ ವ್ಯಾನ್‌ ಫೋರಿಸ್ಟ್‌ ಅವರನ್ನು ಮಣಿಸಿ ಭಾರತಕ್ಕೆ 2.5–0.5ರ ಮುನ್ನಡೆ ತಂದುಕೊಟ್ಟರು. ನಾಲ್ಕನೇ ಸುತ್ತಿನಲ್ಲಿ ವಿದಿತ್‌ ಸಂತೋಷ್‌ ಗುಜರಾತಿ, ಇರ್ವಿನ್‌ ಲಾ ಆಮಿ ವಿರುದ್ಧ ಡ್ರಾ ಮಾಡಿಕೊಂಡರು.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತ 3–1ಯಿಂದ ಪೆರು ತಂಡವನ್ನು ಸೋಲಿಸಿತು.

ಮೊದಲ ಸುತ್ತಿನಲ್ಲಿ ಕೊನೆರು ಹಂಪಿ, ಡೇಸಿ ಕೋರಿ ವಿರುದ್ಧ ಸೋತರು. ನಂತರದ ಮೂರು ಸುತ್ತುಗಳಲ್ಲೂ ಭಾರತ   ಪಾರಮ್ಯ ಮೆರೆಯಿತು.

ಡಿ.ಹರಿಕಾ, ಪಾಲ್‌ ಪ್ಯಾರಾಡೇಸ್‌ ಎದುರೂ; ತಾನ್ಯಾ ಸಚ್‌ದೇವ್‌, ಫ್ಲೋರ್‌ ಡಿ ಮರಿಯಾ ಮೇಲೂ; ಈಶಾ ಕರವದೆ, ಆ್ಯನ್‌ ಚುಂಪಿಟ್ಯಾಜ್‌ ವಿರುದ್ಧವೂ ಗೆದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !