ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಒಲಿಂಪಿಯಾಡ್: ಭಾರತ ತಂಡಗಳಿಗೆ ಗೆಲುವು

ಗುಕೇಶ್‌ಗೆ ಸತತ ಏಳನೇ ಜಯ
Last Updated 5 ಆಗಸ್ಟ್ 2022, 16:01 IST
ಅಕ್ಷರ ಗಾತ್ರ

ಮಹಾಬಲಿಪುರಂ: ಭಾರತ ‘ಎ’ ಮತ್ತು ‘ಬಿ’ ತಂಡಗಳು ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದ ಏಳನೇ ಸುತ್ತಿನಲ್ಲಿ ಗೆಲುವು ಪಡೆದವು.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ‘ಎ’ 3–1 ರಲ್ಲಿ ಭಾರತ ‘ಸಿ’ ತಂಡವನ್ನು ಮಣಿಸಿತು. ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರ್ಜುನ್‌ ಎರಿಗೈಸಿ ಮತ್ತು ಎಸ್‌.ಎಲ್‌.ನಾರಾಯಣನ್‌ ಅವರು ಕ್ರಮವಾಗಿ ಅಭಿಜಿತ್‌ ಗುಪ್ತಾ ಹಾಗೂ ಅಭಿಮನ್ಯು ಪುರಾಣಿಕ್‌ ಅವರನ್ನು ಮಣಿಸಿದರು.

ಪಿ.ಹರಿಕೃಷ್ಣ– ಸೂರ್ಯಶೇಖರ್‌ ಗಂಗೂಲಿ ಮತ್ತು ವಿದಿತ್ ಸಂತೋಷ್‌ ಗುಜರಾತಿ– ಎಸ್‌.ಪಿ.ಸೇತುರಾಮನ್‌ ನಡುವಿನ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು.

ಭಾರತ ‘ಬಿ’ ತಂಡ 3.5–0.5 ರಲ್ಲಿ ಕ್ಯೂಬಾ ಎದುರು ಗೆದ್ದಿತು. ಅತ್ಯುತ್ತಮ ಆಟ ಮುಂದುವರಿಸಿದ ಡಿ.ಗುಕೇಶ್‌ ಸತತ ಏಳನೇ ಗೆಲುವು ದಾಖಲಿಸಿದರು. ಅವರು ಕ್ಯೂಬಾದ ಕಾರ್ಲೊಸ್ ಅಲ್ಬೊರ್ನೊಜ್‌ ಎದುರು ಗೆದ್ದರು.

ನಿಹಾಲ್‌ ಸರಿನ್‌ ಮತ್ತು ಆರ್‌.ಪ್ರಗ್ನಾನಂದ ಅವರೂ ಗೆಲುವು ಪಡೆದರೆ, ಬಿ.ಅಧಿಬನ್‌ ಅವರು ಎದುರಾಳಿಯ ಜತೆ ಪಾಯಿಂಟ್‌ ಹಂಚಿಕೊಂಡರು.

ಮಹಿಳಾ ‘ಎ’ ತಂಡಕ್ಕೆ ಗೆಲುವು: ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡ 2.5-1.5 ಪಾಯಿಂಟ್‌ಗಳಿಂದ ಅಜರ್‌ಬೈಜಾನ್‌ ತಂಡವನ್ನು ಮಣಿಸಿತು.

ತಂಡದ ಅನುಭವಿ ಆಟಗಾರ್ತಿ ಕೊನೇರು ಹಂಪಿ ಅವರು ಗುನಯ್ ಮಮದ್‌ಜದಾ ಎದುರು ಪರಾಭವಗೊಂಡರು. ಆದರೆ ಆರ್‌.ವೈಶಾಲಿ ಮತ್ತು ತಾನಿಯಾ ಸಚ್‌ದೇವ್‌ ಅವರು ಕ್ರಮವಾಗಿ ಯುಲಿಯಾ ಫತಲಿಯೆವಾ ಹಾಗೂ ಗೊಹರ್ ಬೆಯ್ದುಲ್ಲಯೆವಾ ಎದುರು ಗೆದ್ದರು. ಡಿ.ಹರಿಕಾ ಅವರು ಖನಿಮ್ ಬಲಯೆವಾ ಜತೆ ಡ್ರಾ ಮಾಡಿಕೊಂಡರು.

ಸತತ ಏಳನೇ ಗೆಲುವು ಪಡೆದ ಭಾರತ ‘ಎ’ ತಂಡ ಚಿನ್ನದ ಪದಕದತ್ತ ದಿಟ್ಟ ಹೆಜ್ಜೆಟ್ಟಿದೆ. ಟೂರ್ನಿಯಲ್ಲಿ ಇನ್ನು ನಾಲ್ಕು ಸುತ್ತುಗಳ ಆಟ ಬಾಕಿಯುಳಿದಿವೆ.

ಭಾರತ ‘ಬಿ’ ತಂಡ 1.5–2.5 ಪಾಯಿಂಟ್‌ಗಳಿಂದ ಗ್ರೀಸ್‌ ಎದುರು ಸೋತರೆ, ‘ಸಿ’ ತಂಡ 3–1 ರಿಂದ ಸ್ವಿಟ್ಜರ್‌ಲೆಂಡ್‌ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT