ಚೆಸ್‌: ತೇಜ್‌ಕುಮಾರ್‌ಗೆ ಮುನ್ನಡೆ

7

ಚೆಸ್‌: ತೇಜ್‌ಕುಮಾರ್‌ಗೆ ಮುನ್ನಡೆ

Published:
Updated:

ಮೈಸೂರು: ಗ್ರ್ಯಾಂಡ್‌ಮಾಸ್ಟರ್ ಎಂ.ಎಸ್.ತೇಜ್‌ಕುಮಾರ್‌ ಒಳಗೊಂಡಂತೆ ನಾಲ್ವರು ಸ್ಪರ್ಧಿಗಳು ರಾಜ್ಯಮಟ್ಟದ ಮುಕ್ತ ಚೆಸ್ ಟೂರ್ನಿಯಲ್ಲಿ ಜಂಟಿ ಮುನ್ನಡೆ ಸಾಧಿಸಿದ್ದಾರೆ.

ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ವಿ.ವಿ. ಜಿಮ್ನೇಷಿಯಂ ಹಾಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಐದು ಸುತ್ತುಗಳ ಬಳಿಕ ತೇಜ್‌ಕುಮಾರ್‌, ಎ.ಆಗಸ್ಟಿನ್, ಎಂ.ಪಿ.ಅಜಿತ್ ಮತ್ತು ನವೀನ್ ಎಸ್.ಹೆಗ್ಡೆ ಅವರು ತಲಾ ಐದು ಪಾಯಿಂಟ್‌ಗಳನ್ನು ಕಲೆಹಾಕಿದ್ದಾರೆ.

ಶನಿವಾರ ನಡೆದ ಐದನೇ ಸುತ್ತಿನ ಪಂದ್ಯಗಳಲ್ಲಿ ತೇಜ್‌ಕುಮಾರ್ ಅವರು ಅರುಣ್ ಅಡಪ (4 ಪಾಯಿಂಟ್) ಎದುರೂ, ಆಗಸ್ಟಿನ್ ಅವರು ರಾಮಚಂದ್ರ ಭಟ್ (4) ಮೇಲೂ, ಎಂ.ಪಿ.ಅಜಿತ್ ಅವರು ಎಂ.ತುಳಸಿ (4) ವಿರುದ್ಧವೂ ಜಯ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !