ಶುಕ್ರವಾರ, ಡಿಸೆಂಬರ್ 6, 2019
21 °C
ಪ್ಯಾನಾಸೋನಿಕ್‌ ಓಪನ್‌ ಇಂಡಿಯಾ ಗಾಲ್ಫ್‌: ಕಿಮ್‌ಗೆ ಪ್ರಶಸ್ತಿ

ಚಿಕ್ಕರಂಗಪ್ಪ, ಶಿವ ರನ್ನರ್‌ ಅಪ್‌

Published:
Updated:
Prajavani

ನೂಹ್‌ (ಹರಿಯಾಣ): ಬೆಂಗಳೂರಿನ ಚಿಕ್ಕರಂಗಪ್ಪ ಮತ್ತು ಶಿವ ಕಪೂರ್‌ ಅವರು ಭಾನುವಾರ ಪ್ಯಾನಾಸೋನಿಕ್‌ ಇಂಡಿಯಾ ಓಪನ್‌ ಗಾಲ್ಫ್‌ ಟೂರ್ನಿಯ ಜಂಟಿ ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದಾರೆ. ಕೊರಿಯದ ಯುವ ಗಾಲ್ಫರ್‌ ಜೋಯುಂಗ್‌ ಕಿಮ್‌ ಚಾಂಪಿಯನ್‌ ಪಟ್ಟ ಧರಿಸಿದರು.

17 ವರ್ಷದ ಕಿಮ್‌ ಈ ವರ್ಷ ಏಷ್ಯನ್‌ ಡೆವಲಪ್‌ಮೆಂಟ್‌ ಟೂರ್‌ನಲ್ಲಿ ಮೂರನೇ ಪ್ರಶಸ್ತಿಗೆ ಮುತ್ತಿಕ್ಕಿದರು.

ಹೋದ ವಾರ ನಡೆದಿದ್ದ ಥಾಯ್ಲೆಂಡ್‌ ಓಪನ್‌ ಟೂರ್ನಿಯಲ್ಲಿ ಪ್ಲೇ ಆಫ್‌ನಲ್ಲಿ ಸೋತಿದ್ದ ಕಪೂರ್‌ ಅವರಿಗೆ ಇಲ್ಲಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

ಈ ವಾರ ಅತ್ಯುತ್ತಮ ಸಾಮರ್ಥ್ಯ ತೋರಿದ ಕರ್ನಾಟಕದ ಚಿಕ್ಕರಂಗಪ್ಪ ಎರಡನೇ ಸ್ಥಾನ ಪಡೆದರು. ಇದು ಅವರು ಈ ಋತುವಿನಲ್ಲಿ ತೋರಿದ ಶ್ರೇಷ್ಠ ಸಾಧನೆಯಾಗಿದೆ.

ಭಾರತದವರೇ ಆದ ವಿಕ್ರಾಂತ್‌ ಚೋಪ್ರಾ ಹಾಗೂ ವೀರ್‌ ಅಹ್ಲಾವತ್‌ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದರು. ಅವರು ಕ್ರಮವಾಗಿ ಐದು ಮತ್ತು ಎಂಟನೇ ಸ್ಥಾನ ಗಳಿಸಿದರು. ಅಗ್ರ 20ರೊಳಗೆ ಸ್ಥಾನ ಗಳಿಸಿದ ಭಾರತದ ಇತರ ಗಾಲ್ಫರ್‌ಗಳು: ಅರ್ಜುನ್‌ ಪ್ರಸಾದ್‌, ಎಂ.ಧರ್ಮ (ಇಬ್ಬರೂ 11ನೇ ಸ್ಥಾನ), ಓಂಪ್ರಕಾಶ್‌ ಚೌಹಾನ್‌, ಕರಣ್‌ದೀಪ್‌ ಕೊಚ್ಚಾರ್‌, ಖಲಿನ್‌ ಜೋಷಿ ಮತ್ತು ರಶೀದ್‌ ಖಾನ್‌ (ಎಲ್ಲರಿಗೂ
14ನೇ ಸ್ಥಾನ).

ಪ್ರತಿಕ್ರಿಯಿಸಿ (+)