ಶುಕ್ರವಾರ, ನವೆಂಬರ್ 22, 2019
23 °C

ಚಳಿಗಾಲದ ಒಲಿಂಪಿಕ್ಸ್‌ ಮ್ಯಾಸ್ಕಟ್‌ ಆಗಿ ಪಂಡಾ

Published:
Updated:

ಬೀಜಿಂಗ್‌: ಚೀನಾ, 2022ರಲ್ಲಿ ಬೀಜಿಂಗ್‌ನಲ್ಲಿ ನಡೆ ಯಲಿರುವ ಚಳಿಗಾಲದ ಒಲಿಂಪಿಕ್ಸ್ ಮ್ಯಾಸ್ಕಟ್‌ ಆಗಿ ದೇಶದ ಪ್ರಸಿದ್ಧ ವನ್ಯಜೀವಿ ‘ಪಂಡಾ’ವನ್ನು ಮಂಗಳ ವಾರ ಆಯ್ಕೆ ಮಾಡಿದೆ.

ಹಿಮದ ಸೂಟು ಧರಿಸಿರುವ ಮುದ್ದಾಗಿ ಕಾಣುವ ಮ್ಯಾಸ್ಕಟ್‌ಗೆ ‘ಬಿಂಗ್‌ ಡ್ವೆನ್‌ ಡ್ವೆನ್‌’ ಎಂದು ಹೆಸರಿಡಲಾಗಿದೆ. ಬೀಜಿಂಗ್‌, ಬೇಸಿಗೆ ಒಲಿಂಪಿಕ್ಸ್‌ ಮತ್ತು ಚಳಿಗಾಲದ ಒಲಿಂಪಿಕ್ಸ್‌ ಆತಿಥ್ಯ ವಹಿಸಿದ ಮೊದಲ ನಗರ ಎನಿಸಲಿದೆ. 2008ರಲ್ಲಿ ಇಲ್ಲಿ ಒಲಿಂಪಿಕ್ಸ್ ನಡೆದಿತ್ತು.

ಪ್ರತಿಕ್ರಿಯಿಸಿ (+)