ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಕಿ.ಮೀ ಅಲ್ಟ್ರಾ ಮ್ಯಾರಥಾನ್‌ನಲ್ಲಿ 21 ಓಟಗಾರರ ಸಾವು: ತನಿಖೆಗೆ ಚೀನಾ ಆದೇಶ

Last Updated 24 ಮೇ 2021, 12:33 IST
ಅಕ್ಷರ ಗಾತ್ರ

ಬೀಜಿಂಗ್‌: ವಿಪರೀತ ಚಳಿ ಮತ್ತು ಗಾಳಿಯಿಂದಾಗಿ ಅಲ್ಟ್ರಾ ಮ್ಯಾರಥಾನ್ ಓಟಗಾರರು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಚೀನಾದ ಪ್ರಾದೇಶಿಕ ಆಡಳಿತ ತನಿಖೆಗೆ ಆದೇಶ ನೀಡಿದೆ.

ಗಾನ್ಜು ಪ್ರಾಂತ್ಯದ ಯೆಲ್ಲೊ ರಿವರ್ ಸ್ಟೋನ್‌ ಫಾರೆಸ್ಟ್‌ನಲ್ಲಿ ಶನಿವಾರ ನಡೆದ 100 ಕಿಲೋಮೀಟರ್‌ ಓಟದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ 21 ಮಂದಿ ಸಾವಿಗೀಡಾಗಿದ್ದರು. ಬದುಕಿ ಉಳಿದವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿತ್ತು. ಒಟ್ಟು 172 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸೂಚಿಸಲಾಗಿದೆ. ಇದೇ ವೇಳೆ ಇಂಥ ವಾತಾವರಣದಲ್ಲಿ ಸ್ಪರ್ಧೆ ಆಯೋಜಿಸಲು ಯಾಕೆ ಮುಂದಾದರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ. ನಗರದ ಹಾವಾಮಾನ ಮಾಹಿತಿ ಕೇಂದ್ರದ ಮುನ್ಸೂಚನೆಯನ್ನು ಲೆಕ್ಕಿಸದೇ ಓಟ ಆಯೋಜಿಸಲಾಗಿತ್ತು ಎನ್ನಲಾಗಿದೆ.

ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಕೆಲವರು ಸ್ಪರ್ಧೆಯ ಸಂದರ್ಭದಲ್ಲಿ ಅನುಭವಿಸಿದ ತೊಂದರೆಯನ್ನು ವಿವರಿಸಿದ್ದಾರೆ. ‘ಗಾಳಿ ವೇಗವಾಗಿ ಬೀಸುತ್ತಿತ್ತು. ನಾನು ಪದೇ ಪದೇ ಬಿದ್ದೆ. ತುಟಿಗಳು ಮರಗಟ್ಟಿಹೋಗಿದ್ದವು. ದೇಹದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೆ. ಇನ್ಸುಲೇಷನ್ ಬ್ಲಾಂಕೆಟನ್ನು ಬಿಗಿಯಾಗಿ ಕಟ್ಟಿದೆ. ಜಿಪಿಎಸ್‌ ಟ್ರ್ಯಾಕರ್‌ ಕೈಗೆತ್ತಿಕೊಂಡು ಎಸ್‌ಒಎಸ್ ಗುಂಡಿ ಒತ್ತಿದೆ. ಅಷ್ಟರಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದೆ’ ಎಂದು ಜಾಂಗ್‌ ಕ್ಸಿಯಾಟೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT