ಐಎಎಎಫ್‌ ಕಪ್‌: ಚಿತ್ರಾಗೆ ನಾಲ್ಕನೇ ಸ್ಥಾನ

7

ಐಎಎಎಫ್‌ ಕಪ್‌: ಚಿತ್ರಾಗೆ ನಾಲ್ಕನೇ ಸ್ಥಾನ

Published:
Updated:

ಒಸ್ತ್ರಾವ, ಜೆಕ್‌ ರಿಪಬ್ಲಿಕ್‌: ಭಾರತದ ಅಥ್ಲೀಟ್‌ ಪಿ.ಯು. ಚಿತ್ರಾ ಅವರು ಐಎಎಎಫ್‌ ಕಾಂಟಿನೆಂಟಲ್‌ ಕಪ್‌ ಟೂರ್ನಿಯ 1500 ಮೀಟರ್ಸ್‌ ಓಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. 

ಶನಿವಾರ ಇಲ್ಲಿ ನಡೆದ ಮಹಿಳೆಯರ ವಿಭಾಗದ 1500 ಮೀಟರ್ಸ್‌ನಲ್ಲಿ ಚಿತ್ರಾ 4 ನಿಮಿಷ 18.45 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಅವರು ಕಂಚಿನ ಸಾಧನೆ ಮಾಡಿದ್ದರು. ಆಗ ಅವರು 4 ನಿಮಿಷ 12.56 ಸೆಕೆಂಡುಗಳಲ್ಲಿ ದೂರ ಕ್ರಮಿಸಿದ್ದರು. 

ಕೀನ್ಯಾದ ವಿನ್ನಿ ಚೆಬೆಟ್‌ ಹಾಗೂ ಅಮೆರಿಕದ ಶೆಲ್ಬಿ ಹೌಲಿಹನ್‌ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದರು. ಮೊರೊಕ್ಕೊದ ರಬಬೆ ಅರಫಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪುರುಷರ 800 ಮೀಟರ್ಸ್‌ ಸ್ಪರ್ಧೆಯಲ್ಲಿ ಭಾರತದ ಜಿನ್ಸನ್‌ ಜಾನ್ಸನ್‌ ಅವರು ಏಳನೇ ಸ್ಥಾನ ಪಡೆದರು. ಒಂದು ನಿಮಿಷ 48.44 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಕೀನ್ಯಾದ ಎಮ್ಯಾನುಯಲ್‌ ಕಿಪ್‌ಕುರೈ ಕೊರಿರ್‌ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

ಜಿನ್ಸನ್‌, ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಒಂದು ನಿಮಿಷ 46.35 ಸೆಕೆಂಡುಗಳಲ್ಲಿ ದೂರ ಕ್ರಮಿಸಿದ್ದರು. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !