ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಎಸ್‌ಎಫ್‌ ದೆಹಲಿ, ಐಟಿಬಿಪಿ ಜಲಂಧರ್‌ ಜಯಭೇರಿ

ಅಖಿಲ ಭಾರತ ಪೊಲೀಸ್‌ ಹಾಕಿ ಚಾಂಪಿಯನ್‌ಷಿಪ್‌
Last Updated 6 ಡಿಸೆಂಬರ್ 2021, 14:38 IST
ಅಕ್ಷರ ಗಾತ್ರ

ಬೆಂಗಳೂರು: ಸಿಐಎಸ್‌ಎಫ್‌ ದೆಹಲಿ ಮತ್ತು ಐಟಿಬಿಪಿ ಜಲಂಧರ್‌ ತಂಡಗಳು ಅಖಿಲ ಭಾರತ ಪೊಲೀಸ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಜಯದ ಓಟ ಮುಂದುವರಿಸಿದವು.

ಫೀಲ್ಡ್‌ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಮಣಿಪುರ ಪೊಲೀಸ್‌ ಮತ್ತು ಜಾರ್ಖಂಡ್‌ ಪೊಲೀಸ್‌ ತಂಡಗಳೂ ಗೆಲುವು ದಾಖಲಿಸಿದವು. ಮಹಿಳಾ ವಿಭಾಗದ ‘ಬಿ’ ಗುಂಪಿನ ಪಂದ್ಯದಲ್ಲಿ ‘ಸಶಸ್ತ್ರ ಸೀಮಾ ಬಲ್‌‘ ತಂಡವು 11–0ರಿಂದ ಮಹಾರಾಷ್ಟ್ರ ಪೊಲೀಸ್‌ ತಂಡದ ಸವಾಲು ಮೀರಿತು.

ಪುರುಷರ ವಿಭಾಗದ ‘ಜಿ’ ಗುಂಪಿನ ಪಂದ್ಯದಲ್ಲಿ ಸಿಐಎಸ್ಎಫ್‌ ದೆಹಲಿ 8–3ರಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಕ್ವಾರ್ಟರ್‌ಫೈನಲ್‌ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ವಿಜೇತ ತಂಡದ ನೀರಜ್ ಯಾದವ್‌ (23 ಮತ್ತು 33ನೇ ನಿಮಿಷ), ಅಭಾಶ್ ಶರ್ಮಾ (28 ಮತ್ತು 40ನೇ ನಿ.) ತಲಾ ಎರಡು ಗೋಲು ಹೊಡೆದರೆ, ಅಂಜೆಲ್ ಮಿಂಜ್‌ (16ನೇ ನಿ.) ನಾಯಕ ಹರ್‌ಪ್ರೀತ್ ಸಿಂಗ್‌ (17ನೇ ನಿ.), ಅದ್ನಾನ್ ವಾಸೀಂ (41ನೇ ನಿಮಿಷ) ಹಾಗೂ ಅಶೋಕ ಕುಮಾರ್‌ ಸೋನಿ (47ನೇ ನಿ.) ಮಿಂಚಿದರು.

ಜಮ್ಮು ಮತ್ತು ಕಾಶ್ಮೀರದ ಜಸ್‌ಪ್ರೀತ್ ಸಿಂಗ್‌ (45 ಮತ್ತು 56ನೇ ನಿ.) ಮತ್ತು ಕರಣ್‌ಜೀತ್ ಸಿಂಗ್‌ (53ನೇ ನಿ.) ಕಾಲ್ಚಳಕ ತೋರಿದರು.

‘ಎಚ್‌’ ಗುಂಪಿನಲ್ಲಿ ಐಟಿಬಿಪಿ ಜಲಂಧರ್‌ 12–0ರಿಂದ ಕೇರಳ ಪೊಲೀಸ್ ಎದುರು, ಮಣಿಪುರ ಪೊಲೀಸ್‌ 3–2ರಿಂದ ಮಹಾರಾಷ್ಟ್ರ ಪೊಲೀಸ್ ವಿರುದ್ಧ, ಜಾರ್ಖಂಡ್‌ ಪೊಲೀಸ್‌ 2–0ಯಿಂದ ಛತ್ತೀಸಗಡ ಪೊಲೀಸ್ ಮೇಲೆ ಜಯ ಸಾಧಿಸಿದವು.

‘ಡಿ‘ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಪ್ರದೇಶ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT