ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Commonwealth Games | ಈಜು: ಸೆಮಿಫೈನಲ್‌ಗೆ ಶ್ರೀಹರಿ ನಟರಾಜ್

ಈಜು: ಸಜನ್‌ ಪ್ರಕಾಶ್, ಕುಶಾಗ್ರಗೆ ನಿರಾಸೆ
Last Updated 30 ಜುಲೈ 2022, 3:34 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಭಾರತದ ಶ್ರೀಹರಿ ನಟರಾಜ್‌ ಅವರು ಪುರುಷರ ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

ಬೆಂಗಳೂರಿನ 21 ವರ್ಷದ ಈಜುಪಟು ಶುಕ್ರವಾರ ತಾವು ಪಾಲ್ಗೊಂಡ ಹೀಟ್ಸ್‌ನಲ್ಲಿ 54.68 ಸೆ.ಗಳೊಂದಿಗೆ ಮೂರನೇ ಸ್ಥಾನ ಹಾಗೂ ಒಟ್ಟಾರೆಯಾಗಿ ಐದನೇ ಸ್ಥಾನ ಪಡೆದು ಸೆಮಿಗೆ ಅರ್ಹತೆ ಗಿಟ್ಟಿಸಿಕೊಂಡರು.

ಶ್ರೀಹರಿ ತಮ್ಮ ವೈಯಕ್ತಿಕ ಶ್ರೇಷ್ಠ (53.77 ಸೆ.) ಸಮಯ ಕಂಡುಕೊಂಡಿದ್ದರೆ, ಇಲ್ಲಿ ಅಗ್ರಸ್ಥಾನ ಪಡೆದು ಸೆಮಿ ಪ್ರವೇಶಿಸುತ್ತಿದ್ದರು. ಹೀಟ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಪೀಟರ್‌ ಕೊಯೆಟ್ಜ್‌ (53.91 ಸೆ.) ಮೊದಲ ಸ್ಥಾನ ಪಡೆದರು.

ಆದರೆ ಸಜನ್‌ ಪ್ರಕಾಶ್‌ ಮತ್ತು ಕುಶಾಗ್ರ ರಾವತ್‌ ಅವರು ತಮ್ಮ ಸ್ಪರ್ಧೆಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಲು ವಿಫಲರಾದರು.

ಪುರುಷರ 50 ಮೀ. ಬಟರ್‌ಫ್ಲೈ ಸ್ಪರ್ಧೆಯ ಹೀಟ್ಸ್‌ನಲ್ಲಿ ಸಜನ್‌ 25.01 ಸೆ.ಗಳೊಂದಿಗೆ ಎಂಟನೇ ಸ್ಥಾನ ಪಡೆದರು.

ಪುರುಷರ 400 ಮೀ. ಫ್ರೀಸ್ಟೈಲ್‌ನಲ್ಲಿ ಕಣಕ್ಕಿಳಿದ ಕುಶಾಗ್ರ ಹೀಟ್ಸ್‌ನಲ್ಲಿ 3 ನಿ. 57.45 ಸೆ.ಗಳೊಂದಿಗೆ ಕೊನೆಯ ಸ್ಥಾನ ಗಳಿಸಿದರು.

ಸಜನ್‌ ಅವರು ಪುರುಷರ 100 ಮೀ. ಮತ್ತು 200 ಮೀ. ಬಟರ್‌ಫ್ಲೈ ಹಾಗೂ ಕುಶಾಗ್ರ ಅವರು ಪುರುಷರ 1,500 ಮೀ. ಫ್ರೀಸ್ಟೈಲ್‌ ಮತ್ತು 200 ಮೀ. ಫ್ರೀಸ್ಟೈಲ್‌ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT