ಭಾನುವಾರ, ಏಪ್ರಿಲ್ 18, 2021
31 °C

ಟಿ.ಟಿ: ಭಾರತ ತಂಡಗಳು ಸೆಮಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಟಕ್‌: ಸುಲಭವಾಗಿ ಗೆದ್ದ ಆತಿಥೇಯ ಭಾರತ ಪುರುಷರ ಮತ್ತು ಮಹಿಳಾ ತಂಡಗಳು 21ನೇ ಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟವು.

ಮಹಿಳಾ ತಂಡವು ವೇಲ್ಸ್‌, ಮಲೇಷ್ಯಾ ಮತ್ತು ನೈಜೀರಿಯಾ ತಂಡಗಳನ್ನು ಕ್ರಮವಾಗಿ 3–0 ಅಂತರದಿಂದ ಸೋಲಿಸಿ ಎಫ್‌ ಗುಂಪಿನ ಸೂಪರ್‌ ಎಂಟರ ಸುತ್ತಿನಿಂದ ಸೆಮಿಫೈನಲ್‌ಗೆ ಮುನ್ನಡೆಯಿತು.

ಪುರುಷರ ತಂಡ, ಶ್ರೀಲಂಕಾ, ಮಲೇಷ್ಯಾ ತಂಡಗಳನ್ನು 3–0 ಯಿಂದ ಸೋಲಿಸಿತು. ‘ಎಫ್‌’ ಗುಂಪಿನ ಕೊನೆಯ ಪಂದ್ಯವನ್ನು ಔಪಚಾರಕ್ಕೆಂಬಂತೆ ವೇಲ್ಸ್‌ ವಿರುದ್ಧ ಆಡಬೇಕಾಗಿದೆ.

ಭಾರತ ತಂಡಗಳ ತರಬೇತುದಾರರಾದ ಆಸ್ಟ್ರೇಲಿಯಾದ ಬ್ರೆಟ್‌ ಕ್ಲಾರ್ಕ್‌ ಮತ್ತು ಸೌಮ್ಯದೀಪ ರಾಯ್‌ ಅವರು ಎಲ್ಲ ಆಟಗಾರರಿಗೂ ಆಡುವ ಅವಕಾಶ ಮಾಡಿಕೊಟ್ಟರು. ಶುಕ್ರವಾರ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ನಡೆಯಲಿವೆ.

ಇಂಗ್ಲೆಂಡ್‌ನ ಪುರುಷರ ಮತ್ತು ಮಹಿಳಾ ತಂಡಗಳೂ ಸೆಮಿಫೈನಲ್‌ ತಲುಪಿವೆ.

ಶನಿವಾರ ವೈಯಕ್ತಿಕ ವಿಭಾಗದ ಪಂದ್ಯಗಳು ಆರಂಭವಾಗಲಿವೆ. ಸತ್ಯನ್‌ ಮತ್ತು ಮಣಿಕಾ ಅವರಿಗೆ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು