ಮಂಗಳವಾರ, ಜೂನ್ 28, 2022
25 °C

ಆರ್ಚರಿ: ಕಂಚಿನ ಪದಕಕ್ಕಾಗಿ ಕಾಂಪೌಂಡ್ ಮಿಶ್ರ ತಂಡದ ಹೋರಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗ್ವಾಂಗ್ಜು, ದಕ್ಷಿಣ ಕೊರಿಯ: ಭಾರತದ ಮಿಶ್ರ ಕಾಂಪೌಂಡ್ ತಂಡವು ಆರ್ಚರಿ ವಿಶ್ವಕಪ್ ಎರಡನೇ ಹಂತದ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ಕಾದಾಡಲಿದೆ. ರಿಕರ್ವ್ ತಂಡ ನೀರಸ ಆಟವಾಡಿ ಹೊರಬಿದ್ದಿದೆ. 

ಶುಕ್ರವಾರ ನಡೆದ ಮಿಶ್ರ ವಿಭಾಗದ ರೋಚಕ ಸೆಮಿಫೈನಲ್‌ನಲ್ಲಿ ಅಭಿಷೇಕ್ ವರ್ಮಾ ಮತ್ತು ಅವನೀತ್ ಕೌರ್ ಅವರು ಎಸ್ಟೋನಿಯಾ ಎದುರು 156-158ರಲ್ಲಿ ಸೋತರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 157-155ರಲ್ಲಿ ಗೆದ್ದಿದ್ದ ಭಾರತ ತಂಡ ಎಂಟರ ಘಟ್ಟದಲ್ಲಿ ಮೆಕ್ಸಿಕೊವನ್ನು 156-153ರಲ್ಲಿ ಮಣಿಸಿತ್ತು. ಕಂಚಿನ ಪದಕಕ್ಕಾಗಿ ನಡೆಯಲಿರುವ ಪ್ಲೇ ಆಫ್‌ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಭಾರತ ನಾಲ್ಕನೇ ಶ್ರೇಯಾಂಕದ ಟರ್ಕಿಯನ್ನು ಎದುರಿಸಲಿದೆ.

ಮಹಿಳೆಯರ ಕಾಂಪೌಂಡ್ ಮತ್ತು ರಿಕರ್ವ್ ತಂಡ ವಿಭಾಗದಲ್ಲಿ ಭಾರತ ಈಗಾಗಲೇ ಕಂಚಿನ ಪದಕ ಗಳಿಸಿದೆ. ಪುರುಷರ ಕಾಂಪೌಂಡ್ ತಂಡ ವಿಭಾಗದಲ್ಲಿ ತಂಡ ಫೈನಲ್ ಪ್ರವೇಶಿಸಿದ್ದು ಶನಿವಾರ ಚಿನ್ನಕ್ಕಾಗಿ ಸೆಣಸಲಿದೆ.  

ಒಲಿಂಪಿಯನ್ ಜೋಡಿ ಅತನು ದಾಸ್ ಮತ್ತು ದೀಪಿಕಾ ಕುಮಾರಿ ಅವರ ಅನುಪಸ್ಥಿತಿಯಲ್ಲಿ ತರುಣ್ ದೀಪ್ ರಾಯ್ ಮತ್ತು ರಿಧಿ ಫೊರ್ ಅವರನ್ನು ಭಾರತ ಮಿಶ್ರ ವಿಭಾಗದಲ್ಲಿ ಕಣಕ್ಕೆ ಇಳಿಸಿದೆ. ಏಳನೇ ಶ್ರೇಯಾಂಕದ ಭಾರತದ ಜೋಡಿಗೆ ಪ್ರೀ ಕ್ವಾರ್ಟರ್‌ನಲ್ಲಿ ಬೈ ಲಭಿಸಿತ್ತು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ 33-38, 36-36, 38-32, 38-36ರಲ್ಲಿ ಜಯ ಗಳಿಸಿತ್ತು. ನಂತರ ಜರ್ಮನಿಗೆ 37-37, 32-35, 36-37ರಲ್ಲಿ ಮಣಿದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.