ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಕ್ಷೇತ್ರದ ಮೇಲೆ ಕವಿದ ಕೋವಿಡ್‌ ಭೀತಿ

Last Updated 27 ಫೆಬ್ರುವರಿ 2020, 19:29 IST
ಅಕ್ಷರ ಗಾತ್ರ

ಹಲವು ರಾಷ್ಟ್ರಗಳಿಗೆ ಎಗ್ಗಿಲ್ಲದೇ ಕಬಂಧಬಾಹುಗಳನ್ನು ಚಾಚಿರುವ ಕೋವಿಡ್‌ (‌ಕೊರೊನಾ) ವೈರಸ್‌ ಆತಂಕದಿಂದ ಈಗಾಗಲೇ ಹಲವು ಕ್ರೀಡಾಕೂಟಗಳು ರದ್ದಾಗಿವೆ. ಕೆಲವನ್ನು ಮುಂದೂಡಲಾಗಿದೆ. ಒಲಿಂಪಿಕ್ಸ್‌ಗೆ ಇನ್ನೂ ಸುಮಾರು ಐದು ತಿಂಗಳು ಇದೆ. ಅಷ್ಟರೊಳಗೆ ನಿಯಂತ್ರಣಕ್ಕೆ ಬರದಿದ್ದಲ್ಲಿ ಟೋಕಿಯೊದಲ್ಲಿ ಜುಲೈ 24 ರಿಂದ ಆಗಸ್ಟ್‌ 9ರವರೆಗೆ ನಿಗದಿಯಾಗಿರುವ ವಿಶ್ವದ ಅತಿ ದೊಡ್ಡ ಕ್ರೀಡಾ ಮೇಳದ ಮೇಲೂ ಇದರ ಪರಿಣಾಮ ಬೀರುವ ಆತಂಕ ಇದ್ದೇ ಇದೆ.

ಕೋವಿಡ್ ವೈರಸ್‌ನಿಂದಾಗಿ ‘ಬಾಧಿತ’ವಾಗಿರುವ ಕ್ರೀಡಾಕೂಟಗಳು

ಆರ್ಚರಿ

ಫೆ. 22 ರಿಂದ 28: ಢಾಕ್ಕಾದಲ್ಲಿ ನಡೆಯಬೇಕಾಗಿದ್ದ ಸಾಲಿಡಾರಿಟಿ ಚಾಂಪಿಯನ್‌ಷಿಪ್‌ ಮುಂದೂಡಿಕೆ.

ಮೇ 4 ರಿಂದ 10: ಶಾಂಘೈಯಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್‌ ರದ್ದು.

ಅಥ್ಲೆಟಿಕ್ಸ್‌

ಮಾರ್ಚ್ 13 ರಿಂದ 15: ನಾನ್‌ಜಿಂಗ್‌ (ಚೀನಾ)ನಲ್ಲಿ ನಡೆಯಬೇಕಾಗಿದ್ದ ವಿಶ್ವ ಜೂನಿಯರ್‌ ಒಳಾಂಗಣ ಕೂಟ ಮೂಂದೂಡಿಕೆ

ಫೆ. 12,13: ಹಾಂಗ್‌ಝೌ– ಏಷ್ಯನ್‌ ಒಳಾಂಗಣ ಚಾಂಪಿಯನ್‌ಷಿಪ್‌ ರದ್ದು

ಬ್ಯಾಡ್ಮಿಂಟನ್‌


ಫೆ. 25 ರಿಂದ ಮಾರ್ಚ್‌ 1: ಹೈನಾನ್‌– ಚೀನಾ ಮಾಸ್ಟರ್ಸ್‌ ಕೂಟ ಮುಂದೂಡಿಕೆ

ಫೆ. 11– 16: ಮನಿಲಾ (ಫಿಲಿಪೀನ್ಸ್‌)– ಏಷ್ಯನ್‌ ಟೀಮ್‌ ಚಾಂಪಿಯನ್‌ಷಿಪ್‌– ಹಿಂದೆ ಸರಿದ ಚೀನಾ, ಹಾಂಗ್‌ಕಾಂಗ್‌

ಮಾರ್ಚ್‌ 3 ರಿಂದ 8: ಮೂಲ್ಹಿಮ್‌– ಜರ್ಮನ್‌ ಓಪನ್‌ ರದ್ದು.

ಮಾರ್ಚ್‌ 26 ರಿಂದ 29: ಕ್ರಾಕೌ (ಪೋಲೆಂಡ್‌)– ಪೊಲೀಶ್‌ ಒಪನ್‌ ಮುಂದೂಡಿಕೆ

ಮಾರ್ಚ್ 24 ರಿಂದ 29: ಹನಾಯ್‌– ವಿಯೆಟ್ನಾಂ ಚಾಲೆಂಜ್‌ ಮುಂದಕ್ಕೆ. ಜೂನ್‌ 2 ರಿಂದ7 ನಿಗದಿ

ಹಾಕಿ

‌ಮಾರ್ಚ್‌ 14 ರಿಂದ 25: ಭಾರತ ಮಹಿಳಾ ತಂಡದ ಚೀನಾ ಪ್ರವಾಸ ರದ್ದು

ಗಾಲ್ಫ್‌

ಫೆ. 20 ರಿಂದ 23: ಪಟ್ಟಾಯ (ಥಾಯ್ಲೆಂಡ್‌)ದಲ್ಲಿ ಹೋಂಡಾ ಎಲ್‌ಪಿಜಿಎ ಟೂರ್‌ ಮುಂದಕ್ಕೆ

ಫುಟ್‌ಬಾಲ್‌

ಫೆ. 26 ರಿಂದ ಮಾರ್ಚ್‌ 8: ತುರ್ಕಮೆನಿಸ್ತಾನದ ಅಷ್ಗಾಬಾಟ್‌ನಲ್ಲಿ ಏಷ್ಯಾ ಪುರುಷರ ಫುಟ್ಸಲ್‌ ಚಾಂಪಿಯನ್‌ಷಿಪ್‌ ಮುಂದೂಡಿಕೆ.

ಈಜು

ಫೆ. 12 ರಿಂದ 16: ನುರ್‌ ಸುಲ್ತಾನ್‌: ಏಷ್ಯನ್‌ ವಾಟರ್‌ಪೊಲೊ ಚಾಂಪಿಯನ್‌ಷಿಪ್‌ ರದ್ದು.

ಟೇಬಲ್‌ ಟೆನಿಸ್‌

ಮೇ 22 ರಿಂದ 29: ಬೂಸಾನ್‌, ದಕ್ಷಿಣ ಕೊರಿಯಾ, ವಿಶ್ವ ಟೀಮ್‌ ಚಾಂಪಿಯನ್‌ಷಿಪ್‌ ಮುಂದೂಡಿಕೆ. ಜೂನ್‌ 21 ರಿಂದ 28ರವರೆ ನಿಗದಿ.

ಜೂನ್‌ 16 ರಿಂದ 21: ದಕ್ಷಿಣ ಕೊರಿಯಾ ಓಪನ್ ರದ್ದು

ಜೂನ್‌ 23 ರಿಂದ 28: ಆಸ್ಟ್ರೇಲಿಯನ್‌ ಓಪನ್‌ ಗೀಲಾಂಗ್‌– ರದ್ದು.

ಟೇಕ್ವಾಂಡೊ

ಏಪ್ರಿಲ್‌ 10, 11: ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿ ಚೀನಾದ ವುಕ್ಸಿಯಿಂದ ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಸಲು ನಿರ್ಧಾರ.

ಟೆನಿಸ್‌

ಮಾರ್ಚ್‌ 3 ರಿಂದ 8: ಫೆಡರೇಷನ್‌ ಕಪ್‌ ಏಷ್ಯಾ– ಒಷಾನಿಯಾ ಒಂದನೇ ಗುಂಪಿನ ಟೂರ್ನಿ. ಚೀನಾದ ಡೊಂಗುವಾನ್‌ನಿಂದ ಯುಎಇಯ ದುಬೈಗೆ ಸ್ಥಳಾಂತರ.

ವಾಲಿಬಾಲ್‌

ಏಪ್ರಿಲ್‌ 22 ರಿಂದ 26: ಯಾಂಗ್‌ಜೌ (ಚೀನಾ): ಬೀಚ್‌ ವಾಲಿಬಾಲ್‌ ವಿಶ್ವಕಪ್‌ ಮುಂದೂಡಿಕೆ

ವೇಟ್‌ಲಿಫ್ಟಿಂಗ್‌

ಏಪ್ರಿಲ್‌ 18 ರಿಂದ 25: ಕಜಕಸ್ತಾನದ ನುರ್‌ ಸುಲ್ತಾನ್‌ನಲ್ಲಿ ನಡೆಯಬೇಕಾಗಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌, ಉಜ್ಬೇಕಿಸ್ತಾನದ ತಾಷ್ಕೆಂಟ್‌ಗೆ ಸ್ಥಳಾಂತರ.

ಕುಸ್ತಿ

ಫೆ 20 ರಿಂದ 23: ನವದೆಹಲಿ. ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದ ಚೀನಾ, ದಕ್ಷಿಣ ಕೊರಿಯಾ, ತುರ್ಕಮೆನಿಸ್ತಾನ ತಂಡಗಳು.

ಮಾರ್ಚ್‌ 27 ರಿಂದ 29: ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿ. ಚೀನಾದ ಕ್ಸಿಯಾನ್‌ನಿಂದ ಕಿರ್ಗಿಸ್ತಾನದ ಬಿಷೆಕ್‌ಗೆ ಸ್ಥಳಾಂತರ.

ಇತರೆ

ಇರಾನ್‌ನಲ್ಲಿ ಫೆ. 24 ರಿಂದ ಹತ್ತು ದಿನ ಎಲ್ಲ ಕ್ರೀಡಾಕೂಟಗಳು ರದ್ದು.

ಟೋಕಿಯೊ ಒಲಿಂಪಿಕ್ಸ್‌ ಸ್ವಯಂಸೇವಕರಿಗೆ ಫೆಬ್ರುವರಿಯಲ್ಲಿ ನಿಗದಿಯಾಗಿದ್ದ ತರಬೇತಿ ಮೇ ತಿಂಗಳಿಗೆ ಮುಂದೂಡಿಕೆ.

ವಿಶ್ವ ಚೆಸ್‌ ಫೆಡರೇಷನ್‌ನ ಕಾರ್ಯಕಾರಿ ಸಮಿತಿ ಸಭೆ (ಫೆ. 28–29) ಚೀನಾದಿಂದ ಯುಎಇಗೆ ಸ್ಥಳಾಂತರ.

ಮಾರ್ಚ್‌ 30 ರಿಂದ ಏ. 5ರವರೆಗೆ ನಡೆಯಬೇಕಾಗಿದ್ದ ಚೀನಾ ಓಪನ್‌ ಸ್ನೂಕರ್ ಚಾಂಪಿಯನ್‌ಷಿಪ್‌ ರದ್ದು.

ಶೂಟಿಂಗ್: ದಕ್ಷಿಣ ಕೊರಿಯಾದಲ್ಲಿ ಒಲಿಂಪಿಕ್ಸ್‌ಗೆ ಸಿದ್ಧತೆಯಾಗಿ ಭಾರತ ನಡೆಸಲು ಉದ್ದೇಶಿಸಿದ್ದ ಒಲಿಂಪಿಕ್‌ ಪೂರ್ವ ಶೂಟಿಂಗ್‌ ಸಿದ್ಧತಾ ಕೇಂದ್ರವನ್ನು ರದ್ದುಗೊಳಿಸಿದೆ ಎಂದು ಭಾರತ ರೈಫಲ್‌ ಶೂಟಿಂಗ್‌ ಸಂಸ್ಥತೆ ಅಧ್ಯಕ್ಷ ರಣೀಂದರ್‌ ಸಿಂಗ್‌ ತಿಳಿಸಿದ್ದಾರೆ.

(ಮಾಹಿತಿ: ಎಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT