ಗುರುವಾರ , ಸೆಪ್ಟೆಂಬರ್ 23, 2021
27 °C

ಇಂಡಿಯಾ ಓಪನ್‌ ಗಾಲ್ಫ್‌ ಟೂರ್ನಿ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರತಿಷ್ಠಿತ ಹೀರೊ ಇಂಡಿಯಾ ಓಪನ್‌ ಪುರುಷರ ಗಾಲ್ಫ್‌ ಟೂರ್ನಿಯನ್ನು ಕೊರೊನಾ ಬಿಕ್ಕಟ್ಟಿನಿಂದಾಗಿ ಶುಕ್ರವಾರ ರದ್ದು ಮಾಡಲಾಗಿದೆ.

ಇದೇ ವರ್ಷದ ಮಾರ್ಚ್‌ 19ರಿಂದ 22ರವರೆಗೆ ಗುರುಗ್ರಾಮದಲ್ಲಿ ನಿಗದಿಯಾಗಿದ್ದ ಈ ಟೂರ್ನಿಯನ್ನು ಕೊರೊನಾದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಮಹಿಳೆಯರ ಇಂಡಿಯಾ ಓಪನ್‌ ಟೂರ್ನಿಯನ್ನೂ ಕೋವಿಡ್‌ನಿಂದಾಗಿ ಮಂಗಳವಾರ ರದ್ದು ಮಾಡಲಾಗಿತ್ತು.

‘ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇಂತಹ ಸಮಯದಲ್ಲಿ ಟೂರ್ನಿ ಆಯೋಜಿಸುವುದು ಸಮಂಜಸವಲ್ಲ. ಗಾಲ್ಫರ್‌ಗಳು  ಹಾಗೂ ಇತರ ಸಿಬ್ಬಂದಿಯ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ. ಯುರೋಪಿಯನ್‌ ಟೂರ್‌ ಜೊತೆ ಚರ್ಚಿಸಿಯೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ‌’ ಎಂದು ಇಂಡಿಯನ್‌ ಗಾಲ್ಫ್‌ ಯೂನಿಯನ್‌ನ (ಐಜಿಯು) ಮುಖ್ಯಸ್ಥ ದೇವಾಂಗ್‌ ಶಾ ಅವರು ಹೇಳಿದ್ದಾರೆ.

‘ಅಕ್ಟೋಬರ್‌ನಲ್ಲಿ ಟೂರ್ನಿ ನಡೆಸುವ ಆಲೋಚನೆ ಇತ್ತು. ಕೊರೊನಾ ಸೋಂಕು ಉಲ್ಬಣಿಸುತ್ತಿರುವುದನ್ನು ನೋಡಿ ಅದು ಅಸಾಧ್ಯ ಎಂಬುದು ಮನದಟ್ಟಾಗಿದೆ. ಹೀಗಾಗಿ ಅನಿವಾರ್ಯವಾಗಿ ಟೂರ್ನಿ ರದ್ದು ಮಾಡಲು ಮುಂದಾಗಿದ್ದೇವೆ. ಮುಂದಿನ ವರ್ಷ ನಿಗದಿಯಂತೆಯೇ ಟೂರ್ನಿ ನಡೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.