ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್; ಎಂಟರ ಘಟ್ಟಕ್ಕೆ ಅಮಿತ್, ಹುಸಾಮುದ್ದೀನ್

Last Updated 1 ಆಗಸ್ಟ್ 2022, 20:15 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್ (ಪಿಟಿಐ): ಭಾರತದ ಅಮಿತ್ ಪಂಘಾಲ್ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಬಾಕ್ಸಿಂಗ್‌ನಲ್ಲಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.

ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕವಿಜೇತ ಅಮಿತ್ ಸೋಮವಾರ ಇಲ್ಲಿ ನಡೆದ ಫ್ಲೈವೇಟ್ (51ಕೆ.ಜಿ) ವಿಭಾಗದಲ್ಲಿ ವನೌತುನ ನಾಮ್ರಿ ಬೆರಿ ವಿರುದ್ಧ ಗೆದ್ದರು.

ಎಡಗೈ ಮತ್ತು ಬಲಗೈಗಳಿಂದ ಪಂಚ್‌ಗಳನ್ನು ಚುರುಕಾಗಿ ನೀಡುವಲ್ಲಿ ಯಶಸ್ವಿಯಾದ ಅಮಿತ್ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿದರು. ಚುರುಕಾದ ಪಾದಚಲನೆ ಮೂಲಕ ನಾಮ್ರಿಯ ಪಂಚ್‌ಗಳನ್ನು ತಪ್ಪಿಸಿಕೊಂಡ ಅಮಿತ್ ಮೇಲುಗೈ ಸಾಧಿಸಿದರು. ಮೂರು ಸುತ್ತುಗಳಲ್ಲಿಯೂ ಅಮಿತ್ ಪಾರಮ್ಯ ಮೆರೆದರು. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಸ್ಕಾಟ್ಲೆಂಡ್‌ನ 20 ವರ್ಷದ ಲೆನನ್ ಮುಲಿಗಾನ್ ವಿರುದ್ಧ ಸೆಣಸುವರು.

ಫೆದರ್‌ವೇಟ್ ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಮೊಹಮ್ಮದ್ 5–0ಯಿಂದ ಬಾಂಗ್ಲಾದೇಶದ ಮೊಹಮ್ಮದ್ ಸಲೀಂ ಹುಸೇನ್ ವಿರುದ್ಧ ಪಾರಮ್ಯ ಮೆರೆದರು. ಚುರುಕಾದ ಪಂಚ್‌ಗಳನ್ನು ಪ್ರಯೋಗಿಸಿದ ಭಾರತದ ಬಾಕ್ಸರ್ ಯಾವುದೇ ಹಂತದಲ್ಲಿಯೂ ತಲೆಬಾಗಲಿಲ್ಲ ಮತ್ತು ಹಿಂದೆಜ್ಜೆ ಇಡಲಿಲ್ಲ. ಆರಂಭದಿಂದಲೂ ಆಕ್ರಮಣಶೀಲರಾದ ಅವರ ಮುಂದೆ ಬಾಂಗ್ಲಾ ಬಾಕ್ಸರ್‌ ಶರಣಾದರು. ಎಂಟರ ಘಟ್ಟದಲ್ಲಿ ಅವರು ನಮಿಬಿಯಾದ ಟ್ರೈಗೇಮ್ ಮಾರ್ನಿಗ್ ಎನ್‌ಡಿವೆಲೊ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT