ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ ಪೋಲೊ: ಕರ್ನಾಟಕ ಶುಭಾರಂಭ

Last Updated 17 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಮೈಸೂರು: ಆತಿಥೇಯಕರ್ನಾಟಕತಂಡದವರು, ಮೈಸೂರು ವಿಶ್ವವಿದ್ಯಾಲಯದ ವಿಲೇಜ್‌ ಹಾಸ್ಟೆಲ್‌ ಮೈದಾನದಲ್ಲಿ ಗುರುವಾರ ಆರಂಭವಾದ ರಾಷ್ಟ್ರಮಟ್ಟದ ಸೈಕಲ್‌ ಪೋಲೊ ಸ್ಪರ್ಧೆಯಲ್ಲಿಶುಭಾರಂಭಮಾಡಿದರು.

ಕರ್ನಾಟಕಸೈಕಲ್‌ ಪೋಲೊ ಸಂಸ್ಥೆ, ಮೈಸೂರು ವಿ.ವಿ ಮತ್ತು ಕೆಎಸ್‌ಒಯು ಸಹಯೋಗದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿಕರ್ನಾಟಕ8–1 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು.

ಐದು ಗೋಲು ಗಳಿಸಿದ ಮಹಾದೇವ್‌, ರಾಜ್ಯತಂಡದಭರ್ಜರಿ ಗೆಲುವಿಗೆ ಕಾರಣರಾದರು. ತೇಜಸ್‌ 2, ರಕ್ಷಿತ್‌ 1 ಗೋಲು ತಂದಿತ್ತರು. ಪುದುಚೇರಿತಂಡದಏಕೈಕ ಗೋಲನ್ನು ಮಣಿಪಾಲನ್‌ ಗಳಿಸಿದರು. ಮೊದಲಾರ್ಧದಲ್ಲಿಕರ್ನಾಟಕ2–1ರ ಮುನ್ನಡೆಯಲ್ಲಿತ್ತು.

ಇತರ ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ 3–1 ರಲ್ಲಿ ತೆಲಂಗಾಣ ವಿರುದ್ಧ; ಇಂಡಿಯನ್‌ ಆರ್ಮಿ 8–1 ರಲ್ಲಿ ಉತ್ತರ ಪ್ರದೇಶ ವಿರುದ್ಧ; ಟೆರಿಟೋರಿಯಲ್‌ ಆರ್ಮಿ 16–1 ರಲ್ಲಿ ಕೇರಳ ವಿರುದ್ಧ; ರಾಜಸ್ತಾನ 9–2 ರಲ್ಲಿ ತಮಿಳುನಾಡು ವಿರುದ್ಧ; ಇಂಡಿಯನ್‌ ಏರ್‌ಫೋರ್ಸ್‌ 15–0ಯಿಂದ ಪುದುಚೇರಿ ವಿರುದ್ಧ; ಮಧ್ಯಪ್ರದೇಶ 4–0ಯಿಂದ ಆಂಧ್ರಪ್ರದೇಶ ವಿರುದ್ಧ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT