ಸೈಕ್ಲಿಂಗ್‌: ಎರಡು ಪದಕ ಗೆದ್ದ ವೆಂಕಪ್ಪ

7

ಸೈಕ್ಲಿಂಗ್‌: ಎರಡು ಪದಕ ಗೆದ್ದ ವೆಂಕಪ್ಪ

Published:
Updated:
Prajavani

ಹುಬ್ಬಳ್ಳಿ: ಕರ್ನಾಟಕದ ವೆಂಕಪ್ಪ ಕೆಂಗಲಗುತ್ತಿ ಅವರು ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂ‍ಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಜಯಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ವೆಂಕಪ್ಪ ಸ್ಕ್ರ್ಯಾಚ್‌ ರೇಸ್‌ ಸ್ಪರ್ಧೆಯಲ್ಲಿ ಬೆಳ್ಳಿ, ಪರ್ಸೂಟ್‌ನ ತಂಡ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ನವದೆಹಲಿಯಲ್ಲಿ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆದಿರುವ ವೆಂಕಪ್ಪ ಹೋದ ವರ್ಷ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದಿದ್ದ ಜೂನಿಯರ್‌ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. 2017 ಮತ್ತು 18ರ ಏಷ್ಯಾಕಪ್‌ನಲ್ಲಿ ಪದಕಗಳನ್ನು ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !