ಗುರುವಾರ , ಏಪ್ರಿಲ್ 15, 2021
23 °C
ರಾಜ್ಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌

ಅಕ್ಷತಾ, ಸೌಮ್ಯಾ ಚಿನ್ನದ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಲ್ಲಿಯ ಅಕ್ಷತಾ ಭೂತನಾಳ ಮತ್ತು ಸೌಮ್ಯಾ ಅಂತಾಪುರ ಅವರು ಶನಿವಾರ ಆರಂಭವಾದ ರಾಜ್ಯಮಟ್ಟದ 15ನೇ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದರು.

ರಾಜ್ಯ ಹಾಗೂ ಜಿಲ್ಲಾ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆ ಸಹಯೋಗದಲ್ಲಿ ಆರಂಭವಾದ ಎರಡು ದಿನಗಳ ಚಾಂಪಿ ಯನ್‌ಷಿಪ್‌ನಲ್ಲಿ 150 ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದಾರೆ. ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಟೂರ್ನಿಗೆ ಇಲ್ಲಿಯೇ ಕರ್ನಾಟಕ ತಂಡವನ್ನು ಆಯ್ಕೆ ಮಾಡ ಲಾಗುತ್ತದೆ. 

ಮೊದಲ ದಿನದ ಫಲಿ ತಾಂಶ:  ಪುರುಷರು: ಲ್ಯಾಪ್ ಎರಡು, ವೈಯಕ್ತಿಕ ಟೈಮ್ ಟ್ರಯಲ್ಸ್‌: ಕಮಲರಾಜ್ ಎನ್. (ಮೈಸೂರು; ಕಾಲ: 19ನಿ,43.12ಸೆ.)–1, ಶ್ರೀಶೈಲ ವೀರಾಪುರ (ವಿಜಯಪುರ)–2, ಸಂತೋಷ ವಿಜಾಪುರ (ವಿಜಯಪುರ)–3. ಲ್ಯಾಪ್‌ ಒಂದು: ವೈಯಕ್ತಿಕ ಟೈಮ್ ಟ್ರಯಲ್ಸ್‌ 14 ವರ್ಷದ ಒಳಗಿನವರು: ಸಾಗರ್‌ ಎಸ್.ತೇರದಾಳ (ವಿಜಯಪುರ; ಕಾಲ: 9ನಿಮಿಷ,57:26ಸೆ.)–1, ರಾಘವೇಂದ್ರ ವಂದಾಲ (ವಿಜಯಪುರ)–2, ಸಂಭಾಜಿ ಜಾಧವ (ಬಾಗಲಕೋಟೆ)–3. ‌ಲ್ಯಾಪ್‌ ಒಂದು, ವೈಯಕ್ತಿಕ ಟೈಮ್ ಟ್ರಯಲ್ಸ್‌, 16 ವರ್ಷದ ಒಳಗಿನವರು: ಪ್ರತಾಪ ಪಡಚಿ (ವಿಜಯಪುರ; ಕಾಲ:9ನಿ,41:42ಸೆ.)–1, ಚರಿತ್‌ಗೌಡ (ಮೈಸೂರು)–2, ಸಂಪತ್ ಪಾಸಮೇಲ (ವಿಜಯಪುರ)–3. ಲ್ಯಾಪ್ ಎರಡು, ವೈಯಕ್ತಿಕ ಟೈಮ್ ಟ್ರಯಲ್ಸ್‌, 18 ವರ್ಷದ ಒಳಗಿನವರು: ಎಡೋನಿಸ್ ಕೆ.ಟಂಗ್ಡು (ಮೈಸೂರು; ಕಾಲ: 19ನಿ,45:28ಸೆ.)–1, ಶ್ರೀಶೈಲ ವೀರಾಪುರ (ವಿಜಯಪುರ)–2, ಸಂತೋಷ ವಿಜಾಪುರ (ವಿಜಯಪುರ)–3. ಲ್ಯಾಪ್ ಎರಡು, ಮಾಸ್‌ ಸ್ಟಾರ್ಟ್, 16 ವರ್ಷದ ಒಳಗಿನವರು: ಚರಿತ್‌ ಗೌಡ (ಮೈಸೂರು; ಕಾಲ:20.55:14ಸೆ.)–1, ಮಲ್ಲಿಕಾರ್ಜುನ ಯಾದವಾಡ (ವಿಜಯಪುರ; )–2, ಹಸ್ಮುಖ್ (ಮೈಸೂರು)–3.

ರಾಜ್ಯ ಹಾಗೂ ಜಿಲ್ಲಾ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆ ಸಹಯೋಗದಲ್ಲಿ ಆರಂಭವಾದ ಎರಡು ದಿನಗಳ ಚಾಂಪಿ ಯನ್‌ಷಿಪ್‌ನಲ್ಲಿ 150 ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದಾರೆ. ಲ್ಯಾಪ್ ಒಂದು, ವೈಯಕ್ತಿಕ ಟೈಮ್ ಟ್ರಯಲ್ಸ್‌: ಸೌಮ್ಯಾ ಅಂತಾಪುರ (ವಿಜಯಪುರ; ಕಾಲ: 11.14:16ಸೆ.)–1, ಸಾವಿತ್ರಿ ಹೆಬ್ಬಾಳಟ್ಟಿ (ಬಾಗಲಕೋಟೆ)–2, ದಾನಮ್ಮ ಗುರವ (ವಿಜಯಪುರ)–3. ಲ್ಯಾಪ್‌ ಒಂದು, ವೈಯಕ್ತಿಕ ಟೈಮ್ ಟ್ರಯಲ್ಸ್‌, 14 ವರ್ಷದ ಒಳಗಿನವರು: ಅಕ್ಷತಾ ಭೂತನಾಳ (ವಿಜಯಪುರ; ಕಾಲ:11ನಿ,29.72ಸೆ.)–1, ಪಾಯಲ್ ಚೌಹಾಣ್ (ವಿಜಯಪುರ)–2, ಕೇರನ್ ಮಾರ್ಷಲ್ (ಮೈಸೂರು)–3. ಲ್ಯಾಪ್‌ ಒಂದು, ವೈಯಕ್ತಿಕ ಟೈಮ್ ಟ್ರಯಲ್ಸ್‌, 16 ವರ್ಷದ ಒಳಗಿನವರು: ಅಕ್ಷತಾ ಭೂತನಾಳ (ವಿಜಯಪುರ; ಕಾಲ:11.38:78ಸೆ.)–1, ಪಾಯಲ್ ಚೌಹಾಣ್ (ವಿಜಯಪುರ)–2, ಭಾವನಾ ಪಾಟೀಲ (ಬಾಗಲಕೋಟೆ)–3.

ಲ್ಯಾಪ್ ಒಂದು, ವೈಯಕ್ತಿಕ ಟೈಮ್ ಟ್ರಯಲ್ಸ್‌, 18 ವರ್ಷದ ಒಳಗಿನವರು: ಸೌಮ್ಯಾ ಅಂತಾಪುರ (ವಿಜಯಪುರ; ಕಾಲ:11.09:64ಸೆ.)–1, ಕಾವೇರಿ ಮುರ ನಾಳ (ವಿಜಯಪುರ)–2, ದಾನಮ್ಮ ಗುರವ (ವಿಜಯಪುರ)–3.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು