ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಕ್ರೀಡಾನಿಲಯಕ್ಕೆ ಸಮಗ್ರ ಪ್ರಶಸ್ತಿ

ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌: ಮೈಸೂರು ರನ್ನರ್ಸ್‌ ಅಪ್‌
Last Updated 15 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ಎರಡನೇ ದಿನವೂ ಪದಕಗಳನ್ನು ಜಯಿಸಿದ ವಿಜಯಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ಗಳು ರಾಜ್ಯಮಟ್ಟದ 15ನೇ ಮೌಂಟೇನ್‌ ಬೈಕ್‌ ಸೈಕ್ಲಿಂಗ್ ಚಾಂಪಿಯಷನ್‌ಚಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು.

ರಾಜ್ಯ ಮತ್ತು ಜಿಲ್ಲಾ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನ ನಡೆದ ಟೂರ್ನಿಯಲ್ಲಿ ವಿಜಯಪುರ ಕ್ರೀಡಾನಿಲಯ 91 ಅಂಕ ಗಳಿಸಿದರೆ, 36 ಅಂಕಗಳನ್ನು ಪಡೆದ ಮೈಸೂರು ಜಿಲ್ಲೆಯ ತಂಡ ರನ್ನರ್ಸ್‌ ಅಪ್‌ ಆಯಿತು. ಒಟ್ಟು 5 ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಿದವು.

ಎರಡನೇ ದಿನದ ಫಲಿತಾಂಶ:ಬಾಲಕಿಯರ ವಿಭಾಗ: ಲ್ಯಾಪ್ ಒಂದು, 16 ವರ್ಷದೊಳಗಿನವರು: ಪಾಯಲ್ ಚವ್ಹಾಣ (ವಿಜಯಪುರ; ಕಾಲ:12ನಿಮಿಷ,22.01ಸೆ.)–1, ಭಾವನಾ ಪಾಟೀಲ (ಬಾಗಲಕೋಟೆ)–2, ಕೇರನ್ ಮಾರ್ಷಲ್ (ಮೈಸೂರು)–3.

ಲ್ಯಾಪ್ ಎರಡು, ಮಾಸ್‌ ಸ್ಟಾರ್ಟ್, 18 ವರ್ಷದ ಒಳಗಿನವರು: ಕಾವೇರಿ ಮುರನಾಳ (ವಿಜಯಪುರ; ಕಾಲ:25ನಿ,20.36ಸೆ.)–1, ದಾನಮ್ಮ ಗುರವ (ವಿಜಯಪುರ)–2, ಭಾವನಾ ಪಾಟೀಲ (ಬಾಗಲಕೋಟೆ)–3.

ಮಹಿಳೆಯರ ವಿಭಾಗ: ಲ್ಯಾಪ್ ಎರಡು, ಮಾಸ್ ಸ್ಟಾರ್ಟ್: ಸೌಮ್ಯಾ ಅಂತಾಪುರ (ವಿಜಯಪುರ)–1, ಕಾವೇರಿ ಮುರನಾಳ (ವಿಜಯಪುರ)–2, ಸಾವಿತ್ರಿ ಹೆಬ್ಬಾಳಟ್ಟಿ (ಬಾಗಲಕೋಟೆ)–3.

ಲ್ಯಾಪ್ ಮೂರು, ಬಾಲಕರ ಮಾಸ್‌ ಸ್ಟಾರ್ಟ್, 16 ವರ್ಷದ ಒಳಗಿನವರು: ಎಡೋನಿಸ್ ಕೆ.ಟಂಗ್ಡು (ಮೈಸೂರು; ಕಾಲ:31ನಿ,22.72ಸೆ.)–1, ಅನಿಲ್ ಕಾಳಪ್ಪಗೋಳ (ವಿಜಯಪುರ)–2, ಮಲ್ಲಿಕಾರ್ಜುನ ಯಾದವಾಡ (ವಿಜಯಪುರ)–3.

ಪುರುಷರ ವಿಭಾಗ: ಲ್ಯಾಪ್ ನಾಲ್ಕು, ಮಾಸ್ ಸ್ಟಾರ್ಟ್: ಕಮಲರಾಜ್ ಎನ್. (ಮೈಸೂರು)1, ತೇಜಸ್ವಿ (ಮೈಸೂರು)–2, ಸಂತೋಷ ವಿಭೂತಿಹಳ್ಳಿ (ಗದಗ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT